ನೀರವ ಮೌನ

-ಕಥೆಬರಹ : ಇಮ್ರಾನ್ ಝೈಫ್ ಪಾಂಡವರಕಲ್ಲು

“ಇಂದು ಸಂಡೆ ಕಣೋ ಎಲ್ಲಿಗಾದರೂ ಹೋಗೋಣ ಬೋರಾಗಿ ಹೋಗಿದೆ”
ಎಂದು ಜಾರ್ಜ್ ತನ್ನ ನಾಲ್ಕು ಸ್ನೇಹಿತರೊಂದಿಗೆ ಹೇಳಿದ.ಅಷ್ಟೊತ್ತಿಗೆ ಅಝೀಂ “ಹ ಕಣೋ ಹೋಗೋಣ,ಎಲ್ಗಾದ್ರು ಹೋಗೋಣ.ಮೊದ್ಲು ಕಾರು ಸ್ಟಾರ್ಟ್ ಮಾಡುವ” ಎಂದ.
ಹಾಗೆ ಶುರು ಮಾಡಿದರು ತಮ್ಮ ಸಂತೋಷದ ಪಯಣವನ್ನು.ಕಾರಿನೊಳಗೆ ಮೋಜು,ಮಸ್ತಿ,ತಮಾಷೆ,ಕಾಮಿಡಿ ಎಲ್ಲವನ್ನೊಳಗೊಂಡ ಒಂದು ಸಂಗತವನ್ನು ಆರಂಭಿಸಿದರು.

ಹುಚ್ಚಾಟದ ಮೂಲಕ ಕಾರು ಮುಂದೆ ಸಾಗಿತು.ಹೀಗೆ “ಮಧ್ಯಾಹ್ನದ ಹೊತ್ತು ಊಟದ ಸಮಯ ಆಯಿತು.ಹಸಿವಾಗ್ತಿದೆ.ಬೇಗ ಹೋಗೋ” ಎಂದ ರಾಜು.
ಹಾಗೇ ಕೊಟ್ಟ ಎಕ್ಸ್ ಲೇಟರ್ ಜಾರ್ಜ್.
“ಹೇಯ್!! ‘ರೋಯಲ್’ ಹೋಟೆಲ್ಗೆ ಹೋದ್ರೆ ಹೆಂಗೆ? ಇವತ್ತು ಸ್ಪೆಷಲ್ ಏನಾದ್ರು ಇರಬಹುದು” ಎಂದ ಮೈಕಲ್.
ಹಾ ಒಕೆ ಎಂದು ಎಲ್ಲರೂ ಸಮ್ಮತಿಸಿದರು.
ತಮ್ಮ ಹೋಟೆಲ್ಗೆ ಬೇಗ ತಲುಪುವ ಸಲುವಾಗಿ ಒಂದು ಅಡ್ಡದಾರಿ ಹುಡುಕಿದರು.ಹಾಗೇ ಒಂದು ಸಣ್ಣ ಹಳ್ಳಿಯನ್ನು ದಾಟಬೇಕಾಗಿತ್ತು.
ಹಾಗೆ ಹಳ್ಳಿ ತಲುಪಿತು.ಹಳ್ಳಿಯ ರಸ್ತೆಯಲ್ಲಿ ಹೀಗೆ ಪಯಣಿಸುತ್ತಾ ಇರಬೇಕಾದರೆ
” ಹೇಯ್ ಹೇಯ್! ಬ್ರೇಕ್ ಹಾಕೋ ! ಓ ದೇವಾ!..” ಎಂದ ಮೈಕಲ್.
ಸ್ನೇಹಿತರೊಂದಿಗೆ ಮುಖ ಮಾಡಿ ಮಾತಾನಾಡುತ್ತಿದ್ದ ಡ್ರೈವರ್ ಜಾರ್ಜ್ ಇತ್ತ ಕಡೆ ನೋಡಿ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ದಿಢೀರ್ ಒಂದು ಹೆಂಗಸಿನ ತಲೆ ಕಾರಿನ ಮಿರರ್ ಗ್ಲಾಸಿಗೆ ಹೊಡೆದು ರಸ್ತೆಗೆ ಉರುಳಿತು.

“ಹೇಯ್ ,ಏನಾಯ್ತೋ ? ಅಯ್ಯೋ!!” ಎಂದೆಲ್ಲಾ ಕಿರುಚಿದರು ಈ ಯುವಕರು.
ವಿಷಯ ಏನು ಎಂದರೆ ಆ ಹೆಂಗಸು ತನ್ನ ಮನೆಯಲ್ಲಿರುವ ತಂದೆಯಿಲ್ಲದ ಎರಡು ಪುಟ್ಟ ಮಕ್ಕಳ ಹೊಟ್ಟೆಪಾಡಿಗೆ ಅನ್ನ ಬೇಯಿಸಲು ಎರಡು ಕೊಡ ನೀರು ಹೊತ್ತುಕೊಂಡು ಇತ್ತ ಕಡೆಯಿಂದ ಅತ್ತ ಕಡೆಗೆ ರಸ್ತೆ ದಾಟುತ್ತಿದ್ದಳು.ಹೆಂಗಸಿಗೆ ಮೊದಲೇ ಈ ಕೊಡ ಭಾರವಾಗಿತ್ತು.ಹಾಗೇ ದಾಟುತ್ತಿರಬೇಕಾದರೆ ಜೋರಾಗಿ ಮುಂದೆಯಿಂದ ಬಂದ ಜಾರ್ಜ್ ನ ಕಾರು ಹೆಂಗಸಿಗೆ ಬಂದು ಢಿಕ್ಕಿ ಹೊಡೆಯಿತು.ಆ ಢಿಕ್ಕಿಯ ರಭಸದಲ್ಲಿ ಹೆಂಗಸಿನ ಕೈಯಲ್ಲಿದ್ದ ಕೊಡ ಕೆಳಕ್ಕೆ ಬಿದ್ದು ಚಲ್ಲಾ ಪಿಲ್ಲಿಯಾಯಿತು. ಹೆಂಗಸಿನ ತಲೆ ಕಾರಿನ ಮಿರರ್ ಗ್ಲಾಸ್ ಗೆ ಹೊಡೆದು ಕೆಳಕ್ಕುರುಳಿದಳು.
ಈ ಯುವಕರು ಭಯಭೀತರಾದರು.
ಭೀತಿಗೊಳಗಾದರು.ಕೈ ಕಾಲೆಲ್ಲಾ ನಡುಗಲಿಕ್ಕೆ ಶುರು ಆಯಿತು.ಯುವಕರು ಕೆಳಗಿಳಿದು ಹೆಂಗಸನ್ನು ನೋಡಿದ್ರು.ರಸ್ತೆ ಪೂರಾ ರಕ್ತ.ಹೆದರಿಗೊಂಡರು.
ಈ ಯುವಕರು ಆ ಹೆಂಗಸನ್ನು ಒಂದು ಸ್ವಲ್ಪವೂ ಮುಟ್ಟದೆ, ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸದೆ ಕಾರು ಸ್ಟಾರ್ಟ್ ಮಾಡಿ ಮುಂದಕ್ಕೆ ಹೋದರು.
ಆ ಹೆಂಗಸು ಚಡಪಡಿಸುತ್ತಿದ್ದಳು.ಆ ಪ್ರದೇಶ ಹಳ್ಳಿಯ ಒಂದು ಮೂಲೆಯಾದ್ದರಿಂದ ಬೇರೆ ಯಾರೂ ಜನರು ಅಕ್ಕಪಕ್ಕದಲ್ಲಿರಲಿಲ್ಲ.
ಒಂದು ತಾಸು ಕಳೆದು ಒಬ್ಬ ತರಕಾರಿ ಕೊಯ್ಯುವವ ಆಕೆಯ ಮಿಡಿತ ನೋಡಿ ಅವಳನ್ನು ಹೊತ್ತು ಹೆಂಗಾದರು ಒಂದು ಆಟೋದ ಮೂಲಕ ಆಸ್ಪತ್ರೆಗೆ ದಾಖಲಿಸಿದ.

ಆದರೆ ಚಿಕಿತ್ಸೆ ಫಲಿಸದೆ ಆಕೆ ತೀರಿ ಹೋದಳು.”ಅರ್ಧಗಂಟೆ ಮುಂಚೆ ಬಂದಿದ್ದರೆ ಜೀವ ಉಳಿಸಬಹುದಿತ್ತು”ಎಂದು ಡಾಕ್ಟರ್ ಹೇಳಿದರಂತೆ .
ಅತ್ತ ಅನ್ನಕ್ಕೆ ಕಾಯುತ್ತಿರುವ ಪುಟ್ಟ ಪುಟ್ಟ ಮಕ್ಕಳು ಪಾಪ ಕಾಯುತ್ತಲೇ ಇದ್ದವು.

ಈ ಯುವಕರಿಗೆ ಸಂಜೆಯ ವೇಳೆಗೆ ಯಾರೋ ಹೇಳಿ ಈ ಸುದ್ದಿ ತಿಳಿಯಿತು.
ಬೇಸರ ವ್ಯಕ್ತಪಡಿಸಿ ಇನ್ನು ಸಾಕು ನಮ್ಮ ಜಾಲಿ ಪಯಣ ಎಂದು ತಮ್ಮ ಮನೆಗೆ ಹಿಂದಿರುಗಲು ತಯ್ಯಾರಾದರು.ಕಾರಿನ ಒಳಗೆ ನೀರವ ಮೌನ.ಎಲ್ಲರೂ ಚಿಂತಾಮಗ್ನರಾಗಿದ್ದರು.

ಹೀಗೆ ಕಾರಿನಲ್ಲಿ ಮರಳಿ ಮನೆಗೆ ಹಿಂದಿರುಗುತ್ತಿದ್ದಾಗ, ಸಂಜೆ ಆರೇಳು ಗಂಟೆಯ ಹೊತ್ತಿಗೆ ಜಾರ್ಜ್ ಮೊಬೈಲ್ ಗೆ ಒಂದು ಕರೆ ಬಂತು.ಅದು ಆತನ ತಮ್ಮನ ಕರೆಯಾಗಿತ್ತು.
“ಹಲೋ”
“ಹಲೋ ಜಾರ್ಜ್, ಜಾರ್ಜ್ …….. ಅದು ..ಅದು..ಅಮ್ಮನಿಗೆ ಆಕ್ಸಿಡೆಂಟ್ ಅಯಿತು.ಅಮ್ಮ ತರಕಾರಿ ತರಕ್ಕೆಂದು ಮಾರ್ಕೆಟ್ ಗೆ ಹೋಗಿ ಬರುವ ಸಂದರ್ಭದಲ್ಲಿ ಒಂದು ಕಾರು ಬಂದು ಅಮ್ಮನಿಗೆ ಢಿಕ್ಕಿ ಹೊಡೆದು ಹೋಯಿತು.ಕಾರಿನಲ್ಲಿ ಮೂವರು ಇದ್ದರಂತೆ.ಕಾರಲ್ಲಿದ್ದ ಯಾರೂ ಒಂದು ಸ್ವಲ್ಪನೂ ಸಹಾಯ ಮಾಡಲಿಲ್ಲ.ಕೆಳಗಿಳಿದು ಅಮ್ಮನನ್ನು ಮೇಲಕ್ಕೆತ್ತಲಿಲ್ಲ.ಆಸ್ಪತ್ರೆಗೆ ದಾಖಲಿಸಲಿಲ್ಲ.ನರಹಂತಕರು ಅವರು.ಪಾಪಿಗಳು ಅವರು. ಹಾಗೆಯೇ ಗಾಡಿ ಸ್ಟಾರ್ಟ್ ಮಾಡಿ ಮುಂದಕ್ಕೆ ಹೋದರಂತೆ.
ಅಮ್ಮನ ತಲೆ ಕಾರಿನ ಮಿರರ್ ಗೆ ಹೊಡೆದು ಗಾಯ ತೀವ್ರವಾಗಿದೆ.ಯಾರೋ ಅಲ್ಲಿ ಒಬ್ಬರು ಮೇಲಕ್ಕೆತ್ತಿ ಆಟೋದಲ್ಲಿ ಕಳಿಸಿದರಂತೆ.ಈಗ ಅಮ್ಮ ಆಸ್ಪತ್ರೆಯಲ್ಲಿದ್ದಾರೆ.ಅಪ್ಪನಿಗೆ ಕಾಲ್ ಮಾಡಿದೆ.ಬೇಗ ಬಾ ಸಿಟಿ ಆಸ್ಪತ್ರೆಗೆ ” ಎಂದು ಹೇಳಿ ಕರೆ ಕಟ್ ಮಾಡಿದ.
ಸ್ನೇಹಿತರೆಲ್ಲರೂ ಮೂಕವಿಸ್ಮಿತರಾದರು.ಕಣ್ಣಲ್ಲಿ ನೀರು ತುಂಬಿ ತುಳುಕಿತು.ಜಾರ್ಜ್ ಅಂತೂ ತಲ್ಲೀನಕ್ಕೊಳಗಾದ.
ತಕ್ಷಣ ಇವರು ಆಸ್ಪತ್ರೆಗೆ ಹೋದರು.ಬಿದ್ದಂಬೀಳ ಎನ್ನುವ ಹಾಗೆ ಓಡಿದರು.ಜಾರ್ಜ್ ಆಸ್ಪತ್ರೆಯ ಐ ಸಿ ಯು ಗೆ ತಲುಪಿದ.ಸಂಬಂಧಿಕರು ಕೂತಿದ್ದಾರೆ.

ಡಾಕ್ಟರ್ ಐಸಿಯು ನಿಂದ ಹೊರಗೆ ಬಂದ ತಕ್ಷಣ ಒಮ್ಮೆ ಸಿಕ್ಕ ಐಸಿಯು ಬಾಗಿಲ ಸೆರೆಯಲ್ಲಿ ಅಮ್ಮನನ್ನು ಜಾರ್ಜ್ ನೋಡಿದ.
ರಕ್ತದೋಕುಳಿಯಲ್ಲಿರುವ ತಾಯಿಯನ್ನು ಹೀಗೇ ಅಳುತ್ತಾ ನೋಡುತ್ತಿದ್ದ.ಕೆಲ ನಿಮಿಷಗಳ ನಂತರ ಜಾರ್ಜ್ ನ ಕಣ್ಣೆದುರು ಚಡಪಡಿಸಿಕೊಂಡು ತನ್ನ ತಾಯಿ ಅಸುನೀಗಿದಳು.ತೀರಿ ಹೋದಳು.ಅಷ್ಟೇ ಹೊತ್ತಿಗೆ ಡಾಕ್ಟರ್ ಕೂಡ ಒಳಗೆ ಹೋಗಿ ಹೊರಬಂದು ತೀರಿದ ಸುದ್ದಿ ಹೇಳಿದ ಮಾತ್ರವಲ್ಲ “ಹತ್ತು ನಿಮಿಷ ಮುಂಚೆ ಬಂದಿದ್ದರೆ ಜೀವ ಉಳಿಸಬಹುದಿತ್ತು” ಎಂದ ಆ ಡಾಕ್ಟರ್. ತನ್ನ ಜೀವದ ಹಂಗಾದ ತಾಯಿ ತೀರಿ ಹೋದಳು.ಪ್ರೀತಿಯ ತಾಯಿ ತೀರಿಹೋದಳು.ಅಮ್ಮನ ಬರ್ತ್ ಡೇ ಗೆ ಒಂದು ಚಿನ್ನದ ಉಂಗುರ ಕೊಡಬೇಕೆಂದಿದ್ದ.

ಅಲ್ಲೇ ಬಾಗಿಲ ಕೆಳಗೆ ಬಿದ್ದು ಜೋರಾಗಿ ಅಮ್ಮಾ ಎಂದು ಕಿರುಚಾಡಿದ.ಬಾಲ್ಯದಲ್ಲಿ ತನ್ನನ್ನು ಆಟವಾಡಿಸಿದ,ಬೆಳೆಸಿದ,ಸಾಕಿದ ಅಮ್ಮನ ನೆನಪು ಕಣ್ಣೆದುರು ತೂಗುತ್ತಿದ್ದವು.ಆ ಕರುಣೆ, ಪ್ರೀತಿ ತೂಗುತ್ತಿದ್ದವು.ಕಣ್ಣಲ್ಲಿ ನೀರು ತುಳುಕಿದವು.ಅದೇ ಸಂದರ್ಭದಲ್ಲಿ ತನ್ನ ಕಾರಿಗೆ ಬಲಿಯಾದ ಆ ಹಳ್ಳಿಯ ಹೆಂಗಸನ್ನೂ ನೆನೆಸಿಕೊಂಡು ಅತ್ತ.ಆ ಹೆಂಗಸಿನ ಮಕ್ಕಳ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ.”ಆ ಹೆಂಗಸನ್ನು ನಾನು ರಕ್ಷಿಸಿದ್ದರೆ!!!” ಎಂದು ತನ್ನಲ್ಲೇ ತಾನು ಹೇಳಿಕೊಂಡ.

ಕಣ್ಮುಚ್ಚಿ ಒಂದು ನಿಮಿಷ ಆಲೋಚಿಸಿ ಅಮ್ಮಾ!!!!!!!!!!!!!!!!!!!! ಎಂದು ಇನ್ನೂ ಜೋರಾಗಿ ಅತ್ತ.ಕಿರುಚಾಡ ತೊಡಗಿದ.ಕೂತಲ್ಲೇ ಚಡಪಡಿಸಿದ.ಹುಚ್ಚನ ತರ ಆಡಿದ.

ಆ ಸಂದರ್ಭದಲ್ಲಿ “ಹೇಯ್ ಏಳೋ ..ಏನಾಯ್ತೋ .ಈ ರೀತಿ ಕಣ್ಣಲ್ಲಿ ನೀರು.. ಯಾಕೋ ಈ ರೀತಿ ಕಿರುಚಾಡುತ್ತಿದ್ದೀಯ.ಏನೋ ಕೆಟ್ಟ ಕನಸು ಕಂಡಿರಬಹುದು.ಮಲಗುವಾಗ ದೇವರ ಹೆಸರು ಹೇಳಿ ಮಲಗು,ಕೈ ಮುಗಿದು ಮಲಗು ಎಂದು ಎಷ್ಟು ಬಾರಿ ಹೇಳಿದರೂ ನನ್ನ ಮಾತು ಕೇಳುವುದಿಲ್ಲ.ಈಗ ನೋಡು ಕೆಟ್ಟ ಕನಸೆಲ್ಲಾ ಕಂಡು ಕಿರುಚಾಡುತ್ತಿದ್ದೀಯ.ಏಯ್ ಏಳೋ..”
ಎಂದು ತನ್ನ ತಾಯಿಯ ಬೈಗುಳದ ಶಬ್ದ ಈತನಿಗೆ ಕೇಳತೊಡಗುತ್ತದೆ.ಮಾತ್ರವಲ್ಲ ತಾಯಿಯ ಕೈ ಯ ಸ್ಪರ್ಶ ಅನುಭವ ಆಗುತ್ತಾ ಇದೆ ಈತನಿಗೆ.

ಒಮ್ಮೆಲೆ ಕಣ್ಣು ತೆರೆದ ,ಮನೆಯ ಮಹಡಿ ಕಾಣುತ್ತಿದೆ.ಅತ್ತ ಕಡೆ ಅಡುಗೆ ಕೋಣೆಯಲ್ಲಿ ಅಮ್ಮ ಚಹಾ ಇಡುತ್ತಿದ್ದಾರೆ.ತಂದೆ ನ್ಯೂಸ್ ಪೇಪರ್ ಓದುತ್ತಾ ಈತನ ತಮ್ಮನಿಗೆ ಸುದ್ದಿಗಳನ್ನು ವಿಶ್ಲೇಷಿಸುತ್ತಿದ್ದಾರೆ.
ಅಚ್ಚರಿಯಾಗಿ ಮೆಲ್ಲನೆ ಎದ್ದ,ಇಲ್ಲಿವರೆಗೆ ಆದದ್ದು ನೈಜ ಘಟನೆಯಲ್ಲ,ಅದು ಕನಸು ಎಂದು ಗೊತ್ತಾದ ನಂತರ ಓಡಿ ಹೋಗಿ ಅಮ್ಮನನ್ನು ತಬ್ಬಿ ಹಿಡ್ಕೊಳ್ತಾನೆ.

ಅಮ್ಮ ಒಮ್ಮೆ ಅವನ ಮುಖ ನೋಡಿ,,”ಏನೋ ಐನೂರು ರೂಪಾಯಿ ಬೇಕಾಗಿತ್ತೊ ಏನೋ ಇವತ್ತು.ತಂದೆಯನ್ನು ಮಾಲೀಸ್ ಮಾಡಲಿಕ್ಕೆ ಇಷ್ಟೊಂದು ಅಕ್ಕರೆ” ಎಂದು ಹೇಳುತ್ತಾ ತೊಳೆದ ಬಟ್ಟೆಯನ್ನು ಒಣಗಿಸಲು ಅಂಗಳದ ಹೊರಗೆ ಹೋದಳು.

16 Comments

  1. ತುಂಬಾ ಅರ್ಥಪೂರ್ಣವಾಗಿದೆ…
    ಇನ್ನಷ್ಟು ಪ್ರತಿಭೆಗಳು ಚಿಗುರಿ ಸಮಾಜದಲ್ಲಿ ಹೊಸ ಕ್ರಾಂತಿಗೆ ಪ್ರೇರಕವಾಗಲಿ ಎಂದು ಆಶಿಸುತ್ತೇನೆ…💐

    Liked by 1 person

  2. Well written Mr.Imran. just tears rolled up in my eyes as I scrolled down the story till end. You have a great potentiality to write more and fabulous stories. Just wishing you all the very success. Keep rocking

    Liked by 1 person

  3. Well begun is half done – This quote suits you now✨ It’s a wonderful Kickstart. A lesson learnt from this is never going to be forgotten 💕

    Liked by 1 person

Leave a comment