
ಕಥೆ ಬರಹ : ಇಮ್ರಾನ್ ಪಾಂಡವರಕಲ್ಲು
ಅಲ್ಪ ಸ್ವಲ್ಪ ಹಂಚು ಮುರಿದ ಮನೆಯಲ್ಲೊಂದು ಬಡ ಕುಟುಂಬದ ಜೀವನವೊಂದು ನೆಮ್ಮದಿಯಲ್ಲಿ ಸಾಗುತ್ತಿತ್ತು. ಆ ಮನೆಗೊಂದು ಅನು ಎಂಬ ಸೌಭಾಗ್ಯವಂತಳು ಹುಟ್ಟಿ ಬರುತ್ತಾಳೆ. ಮಗಳ ಮುಖವನ್ನು ನೋಡಿ ತಂದೆ ಮತ್ತು ತಾಯಿ ಅತೀ ಸಂತಸ ಪಡುತ್ತಾರೆ.ಮನೆಗೊಂದು ಬೆಳಕು ಉದಯವಾಯಿತು ಎಂದು ಮನದಲ್ಲಿಯೇ ಮಾತಾಡಿಕೊಳ್ಳುತ್ತಾರೆ. ಹಲವು ದಿನಗಳ ನಂತರ ಈ ಹೆಣ್ಣು ಮಗಳು ‘ಮೂಗಿ’ (ಮಾತು ಬಾರದವಳು) ಎಂದು ಡಾಕ್ಟರ್ ದೃಢೀಕರಿಸುತ್ತಾರೆ. ಹೆತ್ತವರು ಮಾನಸಿಕವಾಗಿ ತಲ್ಲೀನರಾಗುತ್ತಾರೆ.
ಇತ್ತ, ಎರಡು ಅಂತಸ್ತಿನ ಅತೀ ಶ್ರೀಮಂತಿಕೆಯುಳ್ಳ ಮನೆಯಲ್ಲೊಂದು ಹೆಣ್ಣು ಮಗು ಜನಿಸುತ್ತಾಳೆ. ಬಹಳ ದೊಡ್ಡ ಉದ್ಯಮಿಯಾದ ತಂದೆ ಮತ್ತು ಕಂಪೆನಿ ಮ್ಯಾನೇಜರ್ ಆದ ತಾಯಿಗೆ ‘ದಿಯಾ’ ಎಂಬ ಒಬ್ಬಳೇ ಮಗಳು ಸರ್ವಸ್ವವಾಗಿದ್ದಳು. ಮದುವೆಯಾಗಿ ಹಲವು ವರ್ಷಗಳಿಂದೀಚೆಗೆ ಈ ಭಾಗ್ಯವನ್ನು ದೇವರು ನೀಡಿದನು. ಅಷ್ಟೊಂದು ಅಕ್ಕರೆ ಅಷ್ಟೊಂದು ಪ್ರೀತಿ. ಜನಿಸಿದ ಹಲವು ದಿನಗಳ ನಂತರ ಈ ಮಗುವಿಗೆ ಕುರುಡುತನ (ಕಣ್ಣು ಕಾಣದವಳು) ರೋಗವಿದೆ ಎಂದು ಹೇಳಿದಾಗ ಹೆತ್ತವರಂತೂ ಕಂಗಾಲಾದರು. ಬಯಕೆಗಳಿಗೆ ಕೊಲ್ಲಿಯಿಟ್ಟಂತಾಯಿತು.
ಸಂಬಂಧವೇ ಇಲ್ಲದ, ಪರಿಚಯನೇ ಇಲ್ಲದ ಈ ಎರಡು ಮನೆಯ ಇಬ್ಬರು ಹೆಣ್ಣು ಮಗಳು ಸ್ನೇಹಿತೆಯರಾಗುವ ಕಥೆಯನ್ನಾಗಿದೆ ನಾನು ಬರೆಯಲು ಹೊರಟಿರುವಂಥದ್ದು.
ಆ ಕುಟುಂಬಕ್ಕೆ ಅನು ಒಬ್ಬಳೇ ಮಗಳಾಗಿದ್ದಳು.ಮತ್ತು ಈ ಕುಟುಂಬಕ್ಕೂ ದಿಯಾ ಒಬ್ಬಳೇ ಮಗಳಾಗಿದ್ದಳು.
ಇದು ದೇವನ ಆಟ,ದೇವನ ವಿಧಿ,ದೇವನು ಕೊಟ್ಟಿರುವಂಥದ್ದು, ಎಂದು ತಮ್ಮಲ್ಲಿಯೇ ತೃಪ್ತಿಪಟ್ಟುಕೊಂಡು ಇವರ ಜೀವನದ ಬಗ್ಗೆ ಚಿಂತಿಸಲು ಆರಂಭಿಸಿದರು.
ಅಂತು ಇಂತು ಇವರಿಬ್ಬರಿಗೆ 20 ವರ್ಷ ತುಂಬಿತು. ಇವರು ಬೇರೆ ಬೇರೆ ಕಾಲೇಜಲ್ಲಿ ಕಲಿಯುತ್ತಿದ್ದರು.
ಇವರಿಗೆ ಅಂಗವೈಕಲ್ಯತೆ ಬಿಟ್ಟರೆ, ಅಂದ-ಚಂದ, ಬುದ್ಧಿ ಎಲ್ಲವೂ ಎರಡು ಪಟ್ಟು ಹೆಚ್ಚಿತ್ತು.ಇವರಿಗೆ ಕಾಲೇಜು ಜೀವನದಲ್ಲಿ ಹೆಚ್ಚೇನು ಸ್ನೇಹಿತರಿಲಿಲ್ಲ. ಇಲ್ಲಿರುವ ವ್ಯತ್ಯಾಸ ದಿಯಾ ಶ್ರೀಮಂತ ಕುಟುಂಬಕ್ಕೆ ಸೇರಿದವಳು.ಅನು ಬಡ ಕುಟುಂಬಕ್ಕೆ ಸೇರಿದವಳು. ಈ ಕ್ಷಣದವರೆಗೆ ಇವರಿಬ್ಬರೂ ಒಟ್ಟು ಸೇರಲಿಲ್ಲ. ಯಾರೆಂದು ಪರಿಚಯವಿಲ್ಲ. ಯಾವ ಸಂಬಂಧವೂ ಇಲ್ಲ.





ಒಂದು ದಿನ ದಿಯಾ ಅವಳ ಒಂದು ಸ್ನೇಹಿತೆಯ ಬಳಿ ಜೊತೆ ಹೊರ ಸುತ್ತಾಡಿಸಬೇಕು ಎಂದು ಒತ್ತಾಯಪಡಿಸುತ್ತಾಳೆ. ನೋಡಕ್ಕಾಗದಿದ್ದರೂ ವಾತಾವರಣದ ಶಬ್ದಗಳನ್ನಾದರೂ ಆಲಿಸಬೇಕೆಂದು ಆಸೆ ಪಡುತ್ತಾಳೆ. ಒಮ್ಮೆಗೆ ಆಕೆಯ ಸ್ನೇಹಿತೆ ನಿರಾಕರಿಸಿದರೂ ಇವಳ ಹಠ ನಿಲ್ಲದ ಕಾರಣ ಇಲ್ಲದ ಮನಸ್ಸಿನಿಂದ ಕೈ ಹಿಡಿದು ಕೊಂಡು ಒಂದು ನಲ್ವತ್ತೈದು ಕಿಲೋ ಮೀಟರ್ ವರೆಗೆ ಆಟೋದಲ್ಲಿ ಹತ್ಕೊಂಡು ಇಬ್ಬರೂ ಒಂದೂರಿಗೆ ಬರ್ತಾರೆ. ಮಧ್ಯದಲ್ಲಿ ಒಂದು ರಸ್ತೆ ಅಪಘಾತ ನಡೆಯುತ್ತದೆ. ಆ ಸಂದರ್ಭದಲ್ಲಿ ಸೇರಿದ ಜನಜಂಗುಳಿಯಿಂದ ಈ ದಿಯಾ ಆಕೆಯ ಸ್ನೇಹಿತೆಯಿಂದ ತಪ್ಪಿಕೊಳ್ಳುತ್ತಾಳೆ. ದಿಯಾಳಿಗೆ ಗಾಬರಿಯಾಗುತ್ತದೆ. ಹಿಡಿದುಕೊಂಡ ಕೈ ಕಾಣೆಯಾಗಿದೆ. ಇತ್ತ ಇವಳಿಗೂ ಗಾಬರಿಯಾಗತೊಡಗಿತು. ಇವಳೂ ದಿಯಾಳನ್ನು ಹುಡುಕಲು ಪ್ರಾರಂಭಿಸುತ್ತಾಳೆ. ದಿಯಾ ದಿಕ್ಕುತೋಚದೆ ಚಡಪಡಿಸುತ್ತಿರುತ್ತಾಳೆ. ಇವಳಿಗೆ ಇಷ್ಟು ವರ್ಷದಲ್ಲಿ ಇದು ಪ್ರಥಮ ಅನುಭವ. ತನ್ನ ಹೆತ್ತವರು ತನಗೆ ಇಂತಹ ಯಾವುದೇ ಅನುಭವಗಳಾಗದಂತೆ ಚೆನ್ನಾಗಿ ನೋಡಿಕೊಂಡಿದ್ದರು. ದುರಾದೃಷ್ಟವಶಾತ್ ಇವಳನ್ನು ಸೇರಿಸಿದ ಕಾಲೇಜಲ್ಲಿ ಇವಳಿಗೆ ಯಾರೂ ಅಷ್ಟೊಂದು ಕೇರ್ ಮಾಡುವ ಸ್ನೇಹಿತರು ದೊರಕಿಲ್ಲ.
ಅಂತು ಇಂತೂ ಇವರು ಬಂದದ್ದು ಮತ್ತು ಈ ಘಟನೆ ನಡೆದದ್ದು ಅನು ವಾಸಿಸುವ ಪ್ರದೇಶದಲ್ಲಿಯಾಗಿರುತ್ತದೆ. ಈಕೆಯ ಚಡಪಡಿಸುವಿಕೆಯನ್ನು ಗಮನಿಸುತ್ತಿದ್ದ ಅನು ತನ್ನ ಸಹಾಯದಿಂದ ತಾನು ದಿನಾ ಕೂರುವ ಒಂದು ಪಾರ್ಕ್ ಬಳಿಗೆ ದಿಯಾಳನ್ನು ಕರೆತರುತ್ತಾಳೆ. ಇತ್ತ ಅನುವಿಗೂ ಅಕ್ಕರೆಯ ಸ್ನೇಹಿತರೂ ಇರಲಿಲ್ಲ. ಯಾರೆಂದು ಪರಿಚಯವಿಲ್ಲದ, ಕಣ್ಣಿಗೆ ಕಾಣದ ಒಬ್ಬ ಮನುಷ್ಯನ ಬಳಿ ನಾನು ಇದ್ದೇನೆ ಎಂದು ತುಂಬಾ ಗಾಬರಿಯಾಗುತ್ತಾಳೆ ಮಾತ್ರವಲ್ಲ ಅತ್ತು ಬಿಡುತ್ತಾಳೆ. ಇವಳ ಈ ಅಳು ಮತ್ತು ಗಾಬರಿಯನ್ನು ಕಂಡೂ ಇವಳಿಗೂ ಮನದಲ್ಲಿ ಸಂಕಟವುಂಟಾಗಿ ಬೇಜಾರಾಗಿಬಿಡುತ್ತಾಳೆ. ಕೆಲ ನಿಮಿಷಗಳ ನಂತರ ದಿಯಾಳನ್ನು ಸಮಾಧಾನ ಪಡಿಸುವಲ್ಲಿ ಅನು ಯಶಸ್ವಿಯಾಗುತ್ತಾಳೆ. ಇಬ್ಬರೂ ಅಂಗವೈಕಲ್ಯರೆಂದು ಪರಸ್ಪರ ತಿಳಿದುಕೊಳ್ಳುತ್ತಾರೆ. ಹೀಗೆ ಪರಿಚಯವನ್ನು ಮಾಡತೊಡಗುತ್ತಾರೆ. ಮುಕ್ತವಾಗಿ ತಮ್ಮ ಜೀವನದ ಹಾಗು ಹೋಗುಗಳನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಮುಖದಲ್ಲಿ ಎಂದೂ ಅರಳದ ಮಂದಹಾಸ ಅರಳುತ್ತದೆ. ಯಾಕೆಂದರೆ ಇಲ್ಲಿವರೆಗಿನ ಇವರಿಬ್ಬರ ಜೀವನದಲ್ಲಿ ತಂದೆ ತಾಯಿಯನ್ನು ಬಿಟ್ಟರೆ ಯಾರೇ ಒಬ್ಬ ಅಕ್ಕರೆಯ ವ್ಯಕ್ತಿಯ ಸ್ನೇಹದ ಅಭಿರುಚಿಯನ್ನು ಅನುಭವಿಸಿಕೊಳ್ಳಲಿಲ್ಲ.
ತಮ್ಮ ಸಂತಸದ ಮತ್ತು ದುಃಖದ ಸಂಗತಿಗಳನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಹೀಗೆ ಒಂದೇ ಗಂಟೆಯಲ್ಲಿ ಇವರ ಬಾಂಧವ್ಯ ಗಟ್ಟಿಯಾಗುತ್ತದೆ. ಈ ನವ ಅನುಭವವನ್ನು ನೆನೆದು ಇಬ್ಬರೂ ಸಂತಸದ ಕಣ್ಣೀರು ಹಾಕುತ್ತಾರೆ.
ಇವಳು ಸಿಗದೆ ಹಿಂದಿರುಗಿ ಮರಳಿದ, ಇವಳೊಟ್ಟಿಗೆ ಬಂದ ಸ್ನೇಹಿತೆಯ ವಿಚಾರ ಅನುವಿಗೆ ತಿಳಿಯುತ್ತದೆ.
ಇವಳನ್ನು ಸ್ವತಃ ಅನುವೇ ಅಟೊ ಮಾಡಿ ,ಇವಳೊಟ್ಟಿಗೆ ಪ್ರಯಾಣ ಮಾಡಿ ಇವಳಿರುವ ರೂಮ್ ಗೆ ಬಿಟ್ಟು ಬರುತ್ತಾಳೆ.
ಎರಡು ದಿನಗಳ ನಂತರ ಮತ್ತೆ ಅನು ದಿಯಾಳನ್ನು ಭೇಟಿ ಮಾಡಲು ಹೋಗುತ್ತಾಳೆ. ಮತ್ತೆ ಜೊತೆಗೂಡುತ್ತಾರೆ.ಅವಳನ್ನು 10 ದಿನಗಳಮಟ್ಟಿಗೆ ತನ್ನ ರೂಂ ನಲ್ಲಿಯೇ ಇರಿಸಿ ಕಾಲ ಕಳೆಯುತ್ತಾರೆ. ಹೀಗೇ ದಿನಕಳೆದಂತೆ ಇವರ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಇವರ ಸ್ನೇಹ ಸರಿಸಾಟಿಯಿಲ್ಲದ ಸ್ನೇಹವಾಗಿ ಪರಿವರ್ತನೆಗೊಳ್ಳುತ್ತದೆ. ಜೀವಕ್ಕೆ ಜೀವ ಕೊಡಲೂ ಸಿದ್ಧವಿರುವ ಸ್ನೇಹತನಕ್ಕೆ ಬಂದು ಮುಟ್ಟುತ್ತಾರೆ. ಹಲವು ಸ್ನೇಹತನದ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತಾರೆ. ಇವರ ಸ್ನೇಹತನವನ್ನು ಉಳಿದ ಸ್ನೇಹಿತರೂ ಗಮನಿಸುತ್ತಾರೆ ಮಾತ್ರವಲ್ಲ ಆಶ್ಚರ್ಯ ಚಕಿತರಾಗುತ್ತಾರೆ.
ದಿಯಾ ಒಂದು ದಿನ ಜೋರಾಗಿ ಅತ್ತು ತನ್ನ ಕನಸು ಮತ್ತು ಬಯಕೆಯನ್ನು ಅನುವಿನೊಂದಿಗೆ ವಿವರಿಸುತ್ತಾಳೆ.
“ನಿನಗೆ ಕಣ್ಣು ಕಾಣುತ್ತದೆ. ನೀನು ಈ ಜಗತ್ತನ್ನು ನೋಡುತ್ತಿದ್ದೀಯ. ನಾನು ಜನಿಸಿದಿನಿಂದ ನನ್ನ ರೂಪ,ಈ ಜಗತ್ತು ,ತಂದೆ ತಾಯಿ ಯಾವುದನದನ್ನೂ ನೋಡಲಿಲ್ಲ. ನನಗೆ ಈ ಮಳೆ ಹೇಗಿರುತ್ತದೆ, ಮರಗಳು ಹೇಗೆ ಇರುತ್ತದೆ, ನನ್ನ ಮುಖ ಹೇಗಿರುತ್ತದೆ ಎಂದು ನೋಡಬೇಕು. ಏನಿಲ್ಲಾ ಅಂದರೂ ನನಗೆ ನಿನ್ನ ಮುಖವನ್ನಾದರೂ ನೋಡಬೇಕು. ಈ ಬಯಕೆ ಈಡೇರಿದ್ದರೆ ನನ್ನಷ್ಟು ಅತೀ ಸಂತಸದಲ್ಲಿರುವ ವ್ಯಕ್ತಿ ಈ ಜಗತ್ತಿನಲ್ಲಿರಲಿಕ್ಕಿಲ್ಲ. ಎಂದು ಗಟ್ಟಿಯಾಗಿ ಅಪ್ಪಿಕೊಂಡು ಜೋರಾಗಿ ಅತ್ತು ಬಿಡುತ್ತಾಳೆ.
ಅನು ತನಗಿರುವ ಕೊರತೆಯ ಬಗ್ಗೆ ಯಾವುದೇ ಬಗೆಯ ಚಿತನಕ್ಕೊಳಗಾಗದೆ ಇವಳ ನೋವಿಗೆ ಭಾವುಕಳಾಗುತ್ತಾಳೆ.
ಸಂವಹನಕ್ಕೆ ಕಷ್ಟವಾದರೂ ,ಹಲವು ದಿನಗಳವೆರೆಗೂ ಇವರ ಸ್ನೇಹ ಹೀಗೇ ಮುಂದುವರಿಯುತ್ತದೆ. ಒಂದು ದಿನ ಅನು ದಿಯಾಳನ್ನು ಸಡ್ಡೆನ್ ಆಗಿ ಭೇಟಿಯಾಗಿ ಸಂತಸವನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಾಳೆ ” ನಿನ್ನ ಕನಸು ನನಸಾಗುವ ಸಂದರ್ಭ ಬಂದಿದೆ .ನಿನ್ನ ಸಂತಸವನ್ನು ಕಣ್ಣಾರೆ ನಾನು ನೋಡಬೇಕು. ನಿನಗೋಸ್ಕರ ಎರಡು ಕಣ್ಣು ದಾನ ಮಾಡಿದ್ದಾರೆ. ತಂದೆಯವರಲ್ಲಿ ಹೇಳಿ ಶಸ್ತ್ರ ಚಿಕಿತ್ಸೆಗೆ ಹಣದ ವ್ಯವಸ್ಥೆ ಮಾಡು” ಎಂದು ಮಾತು ಬರದ ಬಾಯಿಯಿಲ್ಲಿ ಜೋರಾಗಿ ಕೂಗಿ, ಅವಳಿಗಿಂತ ಇವಳಿಗೇ ಹೆಚ್ಚು ಖುಷಿಯಾದ ಹಾಗೆ ವರ್ತಿಸುತ್ತಾಳೆ. ತನ್ನ ಗೆಳತಿ ಈ ಜಗತ್ತನ್ನು ನೋಡುತ್ತಾಳೆ ಎಂಬ ಆತುರದ ಸಂತೋಷ ಇವಳಲ್ಲಿ ಕಾಡುತ್ತದೆ.
ಇದನ್ನಂತೂ ಕೇಳಿದ ದಿಯಾ ಖುಷಿಯಿಂದ ಆಕಾಶವೇ ಮೈಮೇಲೆ ಬಿದ್ದಹಾಗೆ ವರ್ತಿಸುತ್ತಾಳೆ. ಕಣ್ಣಿಲ್ಲದ ಮುಖದಲ್ಲಿ ಒಂದು ದೊಡ್ಡ ಮಂದಹಾಸ ಪ್ರತ್ಯಕ್ಷಗೊಳ್ಳುತ್ತದೆ. ಅನು ವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾಳೆ. ತಂದೆಗೆ ಕರೆ ಮಾಡಿ ವಿಚಾರ ತಿಳಿಸುತ್ತಾಳೆ.
ಸಂತೋಷದಿಂದ ಆಸ್ಪತ್ರೆಗೆ ಇವರಿಬ್ಬರೂ ಹೋಗುತ್ತಾರೆ. ದಿಯಾಳನ್ನು ಶಸ್ತ್ರ ಚಿಕಿತ್ಸೆಗೋಸ್ಕರ ಐಸಿಯು ಗೆ ಕರೆದುಕೊಂಡು ಹೋಗುತ್ತಾರೆ. ದಿಯಾಳನ್ನು ಅನು ಗಟ್ಟಿ ಅಪ್ಪಿಕೊಳ್ಳುತ್ತಾಳೆ.ಸಂತಸದದಿಂದ ನೋಡಿ ಅಲ್ಲಿಂದ ನಿರ್ಗಮನಳಾಗುತ್ತಾಳೆ.
ಹಲವು ಗಂಟೆಗಳ ಬಳಿಕ ತಂದೆಯವರು,ಮನೆಯವರು ಬರುತ್ತಾರೆ.
ಇವಳ ಶಸ್ತ್ರ ಚಿಕಿತ್ಸೆ ಪೂರ್ಣಗೊಳ್ಳುತ್ತದೆ. ಹಲವು ದಿನಗಳ ನಂತರ ಕಣ್ಣಿನ ಬ್ಯಾಂಡೇಜನ್ನು ತೆಗೆಯುತ್ತಾರೆ. ಒಂದು ಮಿರರ್ ಗ್ಲಾಸ್ ತಂದು ಇವಳ ಬಳಿ ಇಡುತ್ತಾರೆ. ತನ್ನ ಮುಖವನ್ನು ಪ್ರಥಮ ಬಾರಿ ನೋಡುತ್ತಾಳೆ. ಎಲ್ಲಿಲ್ಲದ ಸಂತೋಷ. ಎಲ್ಲಿಲ್ಲದ ಆನಂದ ,ನೆಮ್ಮದಿ. ಹಲವು ಗಂಟೆಗಳವರೆಗೆ ತನ್ನನ್ನೇ ನೋಡಿಕೊಂಡಿರುತ್ತಾಳೆ. ಆ ಹೊಸ ಕಣ್ಣಿನಲ್ಲಿ ಸಂತಸದ ಕಣ್ಣೀರು ಉಕ್ಕಿ ಬಿಡುತ್ತದೆ. ತದನಂತರ ತಂದೆ,ತಾಯಿ,ಸಂಬಂಧಿಕರು,ಗೋಡೆ ಮತ್ತಿತರ ತನಗೆ ಅಗೋಚರವಾಗಿದ್ದ ವಸ್ತುಗಳನ್ನು ನೋಡುತ್ತಾಳೆ. ಮುಟ್ಟುತ್ತಾಳೆ.
ಒಮ್ಮೆಲೆ ತಲೆಯಲ್ಲಿ ಅನು ವಿನ ನೆನಪು ಮೂಡುತ್ತದೆ. ಹೇಯ್ ಹೇಯ್!!!!! ನನ್ ಅನು. ಅನು!! .ಎಲ್ಲಿ ಎಲ್ಲಿ…? ಎಂದು ಚಡಪಡಿಸುತ್ತಾಳೆ.
ಈಗ ಅವಳಿಗೆ ಅನು ಯಾರೆಂದು? ತೀರಾ ಗೊತ್ತಿಲ್ಲ. ಈ ಹಿಂದೆ ನೋಡಿರಿಲಿಲ್ಲ. ಅನು ಜೊತೆಗೂ ಇಲ್ಲ.
ಆಸ್ಪತ್ರೆಯ ಹೊರ ಬಂದು, ಎಲ್ಲ ಹುಡುಗಿಯ ಮುಖ ಮುಟ್ಟಿ ಯಾರು? ಅನು …ಅನು ಎಂದು ಗೋಗರೆಯುತ್ತಾಳೆ. ಆಸ್ಪತ್ರೆಯಿಡೀ ಕಿರುಚುತ್ತಾಳೆ.
ಅದೇ ಆಸ್ಪತ್ರೆಯ ಬಳಿ ಇರುವ ಆ್ಯಂಬುಲೆನ್ಸ್ ನಲ್ಲಿ ಮರಣಶಯ್ಯೆಯಲ್ಲಿರುವ (ಮರಣದ ಕರೆಗೆ ಕಾಯುತ್ತಿರುವ) ಒಂದು ದೇಹ ಕೊನೆಯ ಉಸಿರಾಟದಲ್ಲಿ ಗುಸು ಗುಸು ಮಾಡುತ್ತಿದೆ. ಆ ದೇಹದ ಮುಖದಲ್ಲಿ ಕಣ್ಣಿಲ್ಲ.
ಮುಚ್ಚಿದ ಕಣ್ಣಲ್ಲಿಯೂ ಒಂದೊಂದು ಕಣ್ಣೀರ ಹನಿಯು ಬೀಳತೊಡಗುತ್ತದೆ. ಇದು ಬೇರೆ ಯಾರೂ ಅಲ್ಲ. ದಿಯಾ ಹುಡುಕುತ್ತಿರುವ ಅನು. ” ನಾನು ಇಷ್ಟು ವರ್ಷಗಳವರೆಗೆ ಈ ಜಗತ್ತನ್ನು ನೋಡಿದ್ದು ಸಾಕು. ಇನ್ನು ಮೇಲೆಯಾದರೂ ನನ್ನ ಸ್ನೇಹಿತೆ ದಿಯಾ ಈ ಜಗತ್ತನ್ನು ನೋಡಿ ಅಸ್ವಾದಿಸಲಿ.ಅವಳ ಕನಸು ನನಸಾಗಲಿ ಎಂದು ಉದ್ದೇಶಿಸಿ ತನ್ನ ಎರಡು ಕಣ್ಣನ್ನು ದಿಯಾಳಿಗೆ ದಾನ ಮಾಡಿದಳು.
ತಾನು ಅನು ಎಂದು ಹೇಳಿಕೊಳ್ಳದೆ ತನ್ನ ಹೆಸರು ಬದಲಾಯಿಸಿ ಕೊಟ್ಟು ಕಣ್ಣೆರಡನ್ನೂ ದಾನ ಮಾಡುತ್ತಾಳೆ.
ಇಲ್ಲದಿದ್ದರೆ ದಿಯಾಳಿಗೆ ಇವಳೇ ಪ್ರತ್ಯಕ್ಷವಾಗಿ ತಿಳಿಯಬಹುದಿತ್ತು ಇವಳೇ ಅನು ವೆಂದು.
ಅನು ವಿನ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ವೈದ್ಯರ ಕೆಲ ನಿರ್ಲಕ್ಷ್ಯತನದಿಂದ ತನ್ನ ಜೀವವನ್ನೇ ಕಳೆದುಕೊಳ್ಳುವ ಸಂದರ್ಭ ಅನುವಿಗೆ ಒದಗಿತು.
ಇವರ ಕುಟುಂಬದವರು ತೀರಾ ಬಡವರಾದ್ದರಿಂದ ಏನೋ ಒಂದು ಹೇಳಿ ವೈದ್ಯರ ಪಾರಾಗಿಬಿಟ್ಟರು.ನಂತರ ಹಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದು ಆ ಎಲ್ಲಾ ವೈದ್ಯರನ್ನು ಸಸ್ಪೆಂಡ್ ಮಾಡಲಾಗುತ್ತದೆ. ಆದರೆ ಅನು ವಿನ ಜೀವ ಉಳಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
“ನಾನು ನಿನ್ನ ಕರುಳು ಸ್ನೇಹಿತೆ ಅನು” ಎಂದು ಬಾಯಿ ಬರದ ಕಾರಣ ಮತ್ತು ಮರಣಶಯ್ಯೆಯಲ್ಲಿರುವ ಕಾರಣ ಹೇಳಿಕೊಳ್ಳಲಾಗದೆ ಪಡುತ್ತಿದ್ದ ಪಾಡು ದೇವರಿಗೆ ಗೊತ್ತು.
ಇತ್ತ “ನನಗೆ ಕಣ್ಣು ದಾನ ಕೊಟ್ಟಿದ್ದು ಅನು ಎಂದು ತಿಳಿಯದೇ , ತನ್ನ ಕರುಳ ಸ್ನೇಹಿತರು ಹುಡುಕಾಟಕ್ಕಾಗಿ ಚಡಪಡಿಸುತ್ತಿರುವ ತವಕ ಅಷ್ಟಿಷ್ಟಲ್ಲ.
ಅನು ಸಾವನ್ನಪ್ಪುತ್ತಾಳೆ ಮಾತ್ರವಲ್ಲ ಅವಳನ್ನು ಮಣ್ಣಿನಡಿಗೆ ಹೂತುಹಾಕುತ್ತಾರೆ.
ಹಲವು ದಿನಗಳ ಬಳಿಕ “ತನಗೆ ಕಣ್ಣು ದಾನ ಮಾಡಿದ್ದು ಅನು. ಹಾಗೆಯೇ ವೈದ್ಯರ ಬೇಜಾವಬ್ದಾರಿತನದಿಂದ ಸಾವನ್ನಪ್ಪಿದ್ದಳು” ಎಂದು ದಿಯಾ ಳಿಗೆ ಸುದ್ದಿ ತಿಳಿಯುತ್ತದೆ.
ಈ ಸುದ್ದಿ ತಿಳಿದ ದಿಯಾಳ ರೋದನ ತಾರಕಕ್ಕೇರಿತು.
ತನ್ನ ಜೀವದ ಹಂಗನ್ನೂ ತೊರದು ತನಗಾಗಿ ಎರಡು ಕಣ್ಣನ್ನು ದಾನ ಮಾಡಿದ ತನ್ನ ಸ್ನೇಹಿತೆ ಅನು ವಿನ ಕಾರ್ಯಕ್ಕೆ ಯಾರು ಸರಿಸಾಟಿಯಿಲ್ಲ. ಅವಳು ಯಾರೆಂದು ನೋಡದೇ,ಅವಳ ಮುಖ, ರೂಪ ನೋಡದ ನನ್ನಂತಹ ದುರ್ದೈವಿ ಯಾರೂ ಇಲ್ಲ ಎಂದು ಗೋಗರೆಯುತ್ತಾಳೆ.
ನಂತರ ವರ್ಷಾ ವರ್ಷ ಒಂದೊಂದು ಅನುವಿನ ಸವಿನೆನಪು ಕಾರ್ಯಕ್ರಮವನ್ನು ಮಾಡಲಾರಂಭಿಸುತ್ತಾಳೆ. ತನ್ನ ಎರಡು ಕಣ್ಣು ಕಳೆದುಕೊಂಡದ್ದಿಕ್ಕಿಂತ ದೊಡ್ಡದಾದ ಕಳೆದುಕೊಳ್ಳುವಿಕೆ ತನ್ನ ಜೀವನದಲ್ಲಿ ಸಂಭವಿಸಿತು ಎಂದು ತಲ್ಲೀನಳಾಗುತ್ತಾಳೆ.
ಇದು ರೋಮಾಂಚಕಾರಿಯಾದ ಒಂದು ಸ್ನೇಹದ ಅನುಬಂಧದ ಮೈ ನವಿರೇಳಿಸುವಂತಹ ಕತೆ. ಅವಳು ಮತ್ತು ಇವಳು.
Really its heart touching…
The way of writing is superb…
LikeLike
ಕುತೂಹಲಕಾರಿ ಕಥನ.
ಕಣ್ಣಂಚಿನಲ್ಲಿ ನೀರು ತುಂಬುವಂತೆ ಮಾಡುವ ಬರಹ🔥
LikeLike
Never thought this story would take such a tremendous tragic end!
During these days where we find people who backstab others this kind of stories inspire us a lot and also The compassion to the stranger can be seen ❤️ Thank you Imran zaif for such a mind changing story
LikeLike
ಅನಿರೀಕ್ಷಿತ ತಿರುವುಗಳನ್ನು ಒಳಗೊಂಡ ಕಥಾಹಂದರ ….ತುಂಬಾ ಚೆನ್ನಾಗಿದೆ…ಶುಭವಾಗಲಿ
LikeLike
ಆರಂಭದಿಂದ ಅಂತ್ಯದವರೆಗೆ ಈ ಒಂದು ಬರಹವನ್ನು ಓದುವಾಗ ಓದುಗರ ಮನಸ್ಸು ಕಥೆಯಿಂದ ಸ್ವಲ್ಪವೂ ಬೇರೆಡೆಗೆ ಹೋಗದ ರೀತಿಯಲ್ಲಿ ರೋಚಕತೆಯ ಸನ್ನಿವೇಶಗಳನ್ನೊಳಗೊಲಿಸಿದ ಆಕರ್ಶಕ ಬರವಣಿಗೆ…
LikeLike