ಡೆತ್ ವಾರೆಂಟ್!!

– ಇಮ್ರಾನ್ ಪಾಂಡವರಕಲ್ಲು

“ನಾಳೆಯಾದ್ರು ಬೇಗ ಬಾ. ಬೆಳಿಗ್ಗೆ ಸರಿಯಾಗಿ 6:30 ಗಂಟೆಗೆ ರೆಡಿಯಾಗು. ಬರುವಾಗ ಮರೆಯದೇ ಮಳೆ ಕೋಟು ತಗೊಂಡು ಬಾ. ಲೇಟ್ ಮಾಡ್ಬೇಡ” ಎಂದು ರಂಗ್ಸುದ್ ನ ಬಾಸ್ ಹೇಳಿದ್ದೇ ತಡ, “ಈ ಹಿಂದೆ ಕೆಲಸಕ್ಕೆ ಹೋದ ನಾಲ್ಕು ದಿನಗಳೂ ನಿದ್ರೆಯ ಕಾರಣದಿಂದ ಬಾಸ್ ಹೇಳಿದ್ದಕ್ಕಿಂತ 2-3 ಗಂಟೆ ತಡವಾಗಿಯೇ ಹೋಗ ಬೇಕಾಯಿತು. ನಾಳೆಯಾದರೂ ಬೇಗ ಹೋಗ್ಬೇಕು” ಎಂದು ರಂಗ್ಸುದ್ ಬೇಗ ಬೇಗ ಪ್ರೆನ್ಡ್ಸು ಮೀಟಿಂಗ್ ಮಾಡ್ಕೊಂಡು, ಜಿಮ್ ಹೋಗುವಂಥದ್ದನ್ನೆಲ್ಲಾ ಮುಗಿಸ್ಕೊಂಡು, ಊಟ ಮಾಡ್ಕೊಂಡು, ಅಲ್ಪ ಸ್ವಲ್ಪ ಮೊಬೈಲ್ ಒತ್ತಿ ಸ್ವಲ್ಪ ಬೇಗನೇ ಮಲಗಿದ.

26 ವರುಷದ ರಂಗ್ಸುದ್, ಈ ಹಿಂದೆ ಹಲವು ವರ್ಷಗಳ ಕಾಲ ಗಲ್ಫ್ ನಲ್ಲಿ ದುಡಿಯುತ್ತಿದ್ದನು. ಹಲವು ಕಾರಣಗಳಿಂದ ಊರಿಗೆ ಬಂದು, ಇಲ್ಲೇ ಸೆಟ್ಲಾಗುವ ಎಂದು ತೀರ್ಮಾನಿಸಿ ಸಿಕ್ಕ ಸಿಕ್ಕ ಕೆಲಸಗಳಿಗೆ ಹೋಗಿ ದುಡಿಯುತ್ತಿದ್ದ ಈತ ಈಗ , ಮರದ ಕೆಲಸದಲ್ಲಿ ಕೂಲಿನಿರತನಾದನು. ನಿಷ್ಠೆಯಿಂದ ತನ್ನ ಕೆಲಸ ಮಾಡುತ್ತಿದ್ದನು. ಪ್ರೆನ್ಡ್ಸುಗಳೊಂದಿಗೆ ಟಿಕ್ ಟಾಕ್, ಆಟ ಮತ್ತಿತರ ಎಂಜಾಯ್ಮೆಂಟ್ ಮಾಡುತ್ತಾ ಇದ್ದನು. ಸಮಾಜ ಪರ ಕೆಲಸದಲ್ಲೂ ಎತ್ತಿದ ಕೈ ಯಾಗಿದ್ದನು ರಂಗ್ಸುದ್. ನೋಡಲು ಸದೃಢವಾಗಿ ಅಂದ ಚಂದವಾಗಿಯೂ ಇದ್ದನು.

ಬೆಳಗೆ ಬೇಗ ಎದ್ದ ರಂಗ್ಸುದ್, ತನ್ನ ಇತರ ಕೆಲಸಗಳನ್ನು ಮಾಡಿ ಕೆಲಸಕ್ಕೆ ಹೊರಟ. ಬಾಸ್ ನ ಕಾರಿನಲ್ಲಿ ಹೋದ ರಂಗ್ಸುದ್ ಮತ್ತು ಇತರ ಕೆಲಸಗಾರರು, ಬೆಳಿಗ್ಗೆಯ ತಿಂಡಿ ಒಟ್ಟಾಗಿ ಮಾಡ್ಕೊಂಡು, ಎಂಜಾಯ್ಮೆಂಟ್ ಮೂಲಕವೇ ಮುಂದೆ ಸಾಗಿದರು. ಮನೆಯಿಂದ 13 ರಿಂದ 17 ಕಿಲೋ ಮೀಟರ್ ನಷ್ಟು ದೂರ ಇವರ ಕೆಲಸದ ತಾಣವಿತ್ತು. ಮಳೆ ಕೋಟ್ ಹಾಕಿಕೊಂಡು ತನ್ನ ಕೆಲಸದಲ್ಲಿ ರಂಗ್ಸುದ್ ಕಾರ್ಯನಿರತನಾದ. ಬೆಳಿಗ್ಗೆ 9:00ರ ನಂತರ ರಂಗ್ಸುದ್ ಏನೋ ಒಂದು ಸ್ವಂತ ಕೆಲಸಕ್ಕೆ ಒಮ್ಮೆ ಮನೆಗೆ ಬಂದು ಮತ್ತೆ ಕೆಲಸದತ್ತ ಮರಳಿದ.

Advertisement
Advertisement
Advertisement
Advertisement
Advertisement

ಕೆಲಸದಲ್ಲಿ ಮುಂದುವರೆದ ರಂಗ್ಸುದ್, ಬೆಳಿಗ್ಗೆ 11 ರಿಂದ 12ರ ಹೊತ್ತಿನ ಸಂದರ್ಭದಲ್ಲಿ , ಇತ್ತ ಮತ್ತೊಬ್ಬ ಕೆಲಸದ ಸಹಪಾಠಿ ಮರಕ್ಕೆ ಏರಿ ಅಲ್ಲೇನೋ ಮಾಡ್ತಿದ್ದನು, ಆತನಿಗೆ ಕೆಳಗಿಂದ ಒಂದು ಕೋಲನ್ನು ಮೇಲಕ್ಕೆ ಕೊಡುವ ಉದ್ದೇಶವನ್ನಿಟ್ಟುಕೊಂಡು ಅದೇ ಮರದ ಕೆಳಗಿದ್ದ ಒಂದು ಪೊದರಿನ ಕಡೆಯಿಂದ ರಂಗ್ಸುದ್, ಕೋಲೊಂದನ್ನು ಮೇಲೆ ಕೊಡುವ ಸಂದರ್ಭದಲ್ಲಿ ಇವನು ಕಾಲಿಗೆ ಹಾಕಿಕೊಂಡಿದ್ದ ಬೂಟಿನಲ್ಲಿ ತಿಳಿಯದೆ ಅಲ್ಲಿದ್ದ ಒಂದು ನಾಗರ ಹಾವಿಗೆ ತಿಳಿಯದೇ ತುಳಿದುಬಿಟ್ಟ. ಆ ಕ್ಷಣದಲ್ಲೇ ಆ ನಾಗರ ಹಾವು ರಂಗ್ಸುದ್ ನ ಕಾಲಿಗೆ ಕಚ್ಚಿತು. ಅದೇ ಕ್ಷಣದಲ್ಲಿ ರಂಗ್ಸುದ್ ಕೆಳಕ್ಕೆ ಕುಸಿದು ಬಿದ್ದುಬಿಟ್ಟ. ಇದನ್ನು ಕಂಡ ಅಲ್ಲಿದ್ದ ಆತನ ಬಾಸ್, ಇತರ ಸ್ನೇಹಿತರಾದ ಕೆಲಸದವರೂ ಆ ಕೂಡಲೇ ಎರಗಿಬಂದು, ಆತನನ್ನು ಬಾಸ್ ನ ಕಾರಲ್ಲಿ ಹಾಕೊಂಡು, ಧಾವಂತರಾಗಿ, ಗಾಬರಿಯಿಂದ ಹಾವು ಕಚ್ಚಿದ್ದಕ್ಕೆ ಮದ್ದು ಕೊಡುವ ಮತ್ತು ಇತರ ಶುಶ್ರೂಷೆಗೂ ಪ್ರತಿಷ್ಠಿತವಾಗಿದ್ದ ,20ಕ್ಕಿಂತ ಹೆಚ್ಚು ಕಿಲೋಮೀಟರ್ ದೂರವಿದ್ದ ತಾಲೂಕು ಖಾಸಗಿ ಆಸ್ಪತ್ರೆಗೆ 20 ನಿಮಿಷದಲ್ಲಿ ಬಂದು ತಲುಪಿದರು.

ಎಲ್ಲರಲ್ಲೂ ಏನೋ ಒಂದು ಗಾಬರಿ, ಆತಂಕವಿದ್ದರೂ ಈ ಆಸ್ಪತ್ರೆಯಲ್ಲಿ ಇವನಿಗೆ ಚಿಕಿತ್ಸೆ ಫಲಕಾರಿಯಾಗುತ್ತದೆ, ಗುಣಮುಖನಾಗುತ್ತಾನೆ ಎಂಬ ಆತ್ಮವಿಶ್ವಾಸವೂ ಒಂದೆಡೆಯಲ್ಲಿ ತುಂಬಿತ್ತು. ಆದರೆ ಹಲವು ನಿಮಿಷಗಳು ಕಳೆದು ಆ ಆಸ್ಪತ್ರೆಯ ಡಾಕ್ಟರ್ ಬಂದು ” ಇವನಿಗೆ ಇಲ್ಲಿ ಸೂಕ್ತ ಚಿಕಿತ್ಸೆಯಿಲ್ಲ. ಚಿಕಿತ್ಸೆ ಫಲಕಾರಿಯಾಗುವ ಬಗ್ಗೆ ನಮಗೆ ಸಂಶಯ ಇದೆ. ನೀವು ಆದಷ್ಟು ಬೇಗ ಇವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ” ಎಂದು ಹೇಳಿದ್ದೇ ತಡ ಒಮ್ಮೆಗೆ ಎಲ್ಲರ ಆತ್ಮವಿಶ್ವಾಸ ಮಾಯವಾಯಿತು. ಆದರೂ ಸಮಯ ವ್ಯರ್ಥ ಮಾಡದೆ ಬಾಸ್ ಮತ್ತು ಇತರ ಸ್ನೇಹಿತರು ಸೇರಿ ಅಲ್ಲಿದ್ದ ಪರಿಚಯಸ್ಥ ಆಂಬುಲೆನ್ಸ್ ಗೆ ಕರೆ ಮಾಡಿ, ಆ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಎಲ್ಲಾ ಪ್ಲಾನ್ ಮಾಡಿದರು ಮಾತ್ರವಲ್ಲ ಆ ಕೂಡಲೇ ಹೊರಡಿದರು.

ಬಾಸ್ ಮತ್ತಿತರು ಆಂಬುಲೆನ್ಸ್ ಜೊತೆಗೆ ಕಾರ್ ಮೂಲಕ ಚಲಿಸಿದರು. ಆಂಬುಲೆನ್ಸ್ ನಲ್ಲಿ ರಂಗ್ಸುದ್ ನನ್ನು ಪೋಷಿಸಲು ಆತನ ಸ್ನೇಹಿತ ಕೂತಿದ್ದ. ಆಂಬುಲೆನ್ಸ್ ಹೀಗೇ ಮುಂದುವರಿಯುತ್ತಿತ್ತು. ಆದರೆ ಶನಿಯೋ ಹಣೆಬರಹವೋ ಏನೋ ಗೊತ್ತಿಲ್ಲ. ಆ ಆಂಬುಲೆನ್ಸ್ ನ ಆಕ್ಸಿಜನ್ ಕಿಟ್ ಸಿಡಿದು ಹಾಳಾಯಿತು. ಒಂದಲ್ಪ ಸಮಯವೂ ವ್ಯರ್ಥ ಮಾಡದೆ ಇನ್ನೊಂದು ಆಂಬುಲೆನ್ಸ್ ನ ವ್ಯವಸ್ಥೆಯನ್ನು ಮಾಡಿ ಮತ್ತೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಈ ಜಿಲ್ಲಾಸ್ಪತ್ರೆ ತಾವಿದ್ದ ಸ್ಥಳದಿಂದ ಸುಮಾರು 50 ರಿಂದ 55 ಕಿಲೋ ಮೀಟರ್ ದೂರವಿತ್ತು. ಆಂಬುಲೆನ್ಸ್ ಮುಂದೆ ಸರಿಯಿತು ಮತ್ತು ಅದರೊಟ್ಟಿಗೆಯೇ ಇದ್ದ ಬಾಸ್ ನ ಕಾರೂ ಮುಂದೆ ಸರಿಯಿತು.

ಒಂದು ಕಡೆಯಲ್ಲಿ ಕಣ್ಣಿಗೆ ಕಣ್ಣಿಟ್ಟು ಕೊಂಡು ಪರಸ್ಪರ ಚಿಂತಾಮಗ್ನರಾಗಿರುವ ಆಂಬುಲೆನ್ಸ್ ಒಳಗಿರುವ ರಂಗ್ಸುದ್ ಮತ್ತು ಆತನ ಸ್ನೇಹಿತ. ಇನ್ನೊಂದು ಕಡೆ ಆತಂಕದಲ್ಲಿರುವ ಆತನ ಬಾಸ್ ಮತ್ತು ಸ್ನೇಹಿತರು. ಇನ್ನೊಂದು ಕಡೆ ಏನೂ ಅರಿಯದ ರಂಗ್ಸುದ್ ಮನೆಯವರು ಮತ್ತು ಊರವರು. ಇನ್ನೊಂದು ಕಡೆ ಧಾವಂತದಿಂದ ಚಲಿಸುತ್ತಿರುವ ಆಂಬುಲೆನ್ಸನ್ನು ವೀಕ್ಷಿಸುತ್ತಿರುವ ಏನೂ ಅರಿಯದ ವೀಕ್ಷಕರು. ಇನ್ನೊಂದು ಕಡೆ ಘಟನೆಯೇ ತಿಳಿಯದ ದುಡಿಮೆಗೋಸ್ಕರ ವಿದೇಶದಲ್ಲಿ ತಂಗಿರುವ ರಂಗ್ಸುದ್ ನ ಇಬ್ಬರು ಸಹೋದರರು. ಇನ್ನೊಂದು ಕಡೆ ತನ್ನ ಪ್ರೀತಿ ಪಾತ್ರರು ಮತ್ತು ಸ್ನೇಹಿತರು.

ಆಂಬುಲೆನ್ಸ್ ಹೀಗೇ ಮುಂದುವರಿಯುತ್ತಿತ್ತು. ಮಧ್ಯಾಹ್ನ ಸುಮಾರು 1:15ರಿಂದ 1:45 ರಷ್ಟು ಹೊತ್ತಾಗುವಾಗ ಬೆಡ್ ನಲ್ಲಿರುವ ರಂಗ್ಸುದ್ ನ ಚಲನಾ ವಲನಾದಲ್ಲಿ ಏನೋ ಬದಲಾವಣೆ ಉಂಟಾಗುವುದನ್ನು ಅಲ್ಲಿ ಕೂತಿರುವ ಆತನ ಸ್ನೇಹಿತ ಕಾಣುತ್ತಾನೆ. ಅಷ್ಟರವೆರೆಗೆ ತೆರೆದಿದ್ದ ಕಣ್ಣು ಮೆಲ್ಲನೆ ಮುಚ್ಚ ತೊಡಗಿತು. ಆದರೆ ಸ್ನೇಹಿತ “ಏನೂ ಆಗಿಲ್ಲ” ಎಂಬ ಏನೋ ಒಂದು ಆತ್ಮವಿಶ್ವಾಸದಿಂದ, ಕಣ್ಣೀರನ್ನು ಒರೆಸುತ್ತಾ ಆಂಬುಲೆನ್ಸ್ ಜಿಲ್ಲಾಸ್ಪತ್ರೆಗೆ ತಲುಪುವವರೆಗೂ ಕಟಿಬದ್ಧನಾಗಿದ್ದ. ಅಂತು ಇಂತು ಜಿಲ್ಲಾಸ್ಪತ್ರೆ ತಲುಪಿತು. ಆತುರಾತುರದಲ್ಲಿ ಇಳಿದು ರಂಗ್ಸುದ್ ನನ್ನು ಚಿಕಿತ್ಸಾ ಕೊಠಡಿಗೆ ಕೊಂಡುಹೋದರು. ಸಹಪಾಠಿಗಳೆಲ್ಲರೂ ಬಲೂ ಗಾಬರಿಯಿಂದಿದ್ದರು. ಕೆಲವೇ ನಿಮಿಷಗಳ ಬಳಿಕ ಅಲ್ಲಿದ್ದ ಡಾಕ್ಟರ್ ಬಂದು ” ಈತನನ್ನು ಉಳಿಸಲು ಸಾಧ್ಯವಿಲ್ಲ. ಈಗಾಗಲೇ ಜೀವ ಹೋಗಿಯಾಗಿದೆ, ತೀರಿಹೋಗಿದ್ದಾರೆ” ಎಂದು ಹೇಳಿ ಬಿಟ್ಟರು.

‘ಎರಡು ಮೂರು ವರ್ಷಗಳಲ್ಲಿ ಮದುವೆಯಾಗುತ್ತೇನೆ, ಮನೆಯ ಕೆಲಸಗಳೆಲ್ಲಾ ಆದ್ಮೇಲೆ ಮದುವೆಯಾಗುತ್ತೇನೆ’ ಎಂದು ಕನಸು ಕಂಡಿದ್ದ ರಂಗ್ಸುದ್ ತನ್ನ ಕನಸ್ಸನ್ನು ನನಸಾಗಿಸದೆ ತನ್ನ 26ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿಬಿಟ್ಟ. ತನ್ನ ಒಟ್ಟಿಗೆ ಇದ್ದ ಸ್ನೇಹಿತರನ್ನು ರಂಗ್ಸುದ್ ಬಿಟ್ಟು ಹೋದ. ತನ್ನ ಪ್ರೀತಿಯ ತಂದೆಯನ್ನೂ, ತಾಯಿಯನ್ನೂ: ಮನೆಯವರನ್ನೂ, ತನ್ನ ಸಹೋದರರನ್ನೂ ರಂಗ್ಸುದ್ ಬಿಟ್ಟು ಹೋದ. ತನ್ನ ಪ್ರೀತಿಪಾತ್ರರರನ್ನು ರಂಗ್ಸುದ್ ಬಿಟ್ಟುಹೋದ.

ವಿಷಯ ತಿಳಿದ ಮನೆಯವರು, ಸಹೋದರರು, ಸ್ನೇಹಿತರು, ಪ್ರೀತಿಪಾತ್ರರು ನಿಬ್ಬೆರಗಾದರು. ಎಂತಹ ಅನಿರೀಕ್ಷಿತ ಮರಣ. ಯಾರೂ ಭಾವಿಸದ ,ಅವನೂ ಭಾವಿಸದ ಮರಣ. ಒಂದು ನಾಗರ ಹಾವು ಎಂಬ ‘ಡೆತ್ ವಾರೆಂಟ್’ ಮೂಲಕ ತನ್ನ ಜೀವವನ್ನೇ ಕಳೆದುಕೊಂಡ. “ಸೃಷ್ಟಿಕರ್ತನಿಚ್ಛಿಸಿದರೆ ಅವನು ಯಾವಾಗ ಬೇಕಾದರೂ ಜೀವವನ್ನು ಮರಳಿ ಮತ್ತೆ ಪಡೆಯಬಹುದು” ಎಂಬ ಹತ್ತು ಹಲವು ಬೇಜಾರಿನ ಮಾತಕತೆಗಳು ಊರವರಲ್ಲಿ ಸುತ್ತಿದ್ದವು.

ಅದು ಹೌದೂ ಕೂಡ .ಯಾಕೆಂದರೆ ಒಬ್ಬರಿಗೆ ಮರಣ ಇದೇ ಸಂರ್ಭದಲ್ಲಿ ಸಂಭವಿಸಬೇಕೆಂದಿದ್ದರೆ ಅದು ಆಗಿಯೇ ತೀರುತ್ತದೆ ಎಂಬುವುದಕ್ಕೆ ರಂಗ್ಸುದ್ ನ ಮರಣ ಉದಾಹರಣೆ. ಮರಣದಿಂದ ಕೂಡಿದ ಆತನ ಮುಖವನ್ನು ನೋಡಲು ಮನೆಗೆ ಬಂದ ಅದೆಷ್ಟೋ ಅವನಿಗರಿದ,ಅವನಿಗರಿಯದ ಸಹಪಾಠಿಗಳು. ಕಣ್ಣೀರಿನಲ್ಲಿ ಬೆಂದು ತನ್ನ ಸಹೋದರನ ಮುಖವನ್ನು ವೀಡಿಯೋ ಕಾಲ್ ಮೂಲಕ ಕೊನೆಯ ಬಾರಿ ನೋಡುತ್ತಿರುವ ಗಲ್ಫ್ ನಲ್ಲಿರುವ ಆತನ ಸಹೋದರರು. ನಿಬ್ಬೆರಗಾಗಿ ಕೂತಿರುವ ತಂದೆ. ಕಿರುಚಾಡುತ್ತಿರುವ ತಾಯಿ,ಸಹೋದರಿ ಮತ್ತು ಬಂಧು ಬಳಗದವರು. ಕಣ್ಣೀರಿಡುತ್ತಾ ಆತನ ಮುಖವನ್ನೇ ನೋಡುತ್ತಿರುವ ಆತನ ಸ್ನೇಹಿತರು ಇದೆಲ್ಲವೂ ನಿಜಕ್ಕೂ ಮನಕಲಕುವಂಥದ್ದು.

ವಿಷಕಾರಿ ಹಾವು ಕಚ್ಚಿದರೆ ಒಬ್ಬ ಮನುಷ್ಯ ಸುಮಾರು 4 ರಿಂದ 5 ಗಂಟೆಯ ವರೆಗೆ ಜೀವದಲ್ಲಿರುತ್ತಾನೆ. ಆದರೆ ರಂಗ್ಸುದ್ ಗೆ ಕಚ್ಚಿದ್ದು ಸಾಮಾನ್ಯ ನಾಗರ ಹಾವಾದರೂ ಕೇವಲ 1 ರಿಂದ 1:30 ಗಂಟೆಯ ವರೆಗೆ ಮಾತ್ರ ಈತನಿಗೆ ಜೀವನಾಳವಿದ್ದದ್ದು. ಅದಲ್ಲದೆ ಹಾವು ಕಚ್ಚಿದ್ದಕ್ಕೆ ಗುಣಮಟ್ಟ ಮತ್ತು ಶೀಘ್ರ ಚಿಕಿತ್ಸೆ ನೀಡುವ ಪ್ರತಿಷ್ಠಿತ ಆಸ್ಪತ್ರೆಯಲ್ಲೂ ಇವನಿಗೆ ಚಿಕಿತ್ಸೆ ಲಭಿಸಿಲ್ಲ ಅಂದರೆ ಫಲಕಾರಿಯಾಗಿಲ್ಲ. ಅದಲ್ಲದೆ ಮೊದಲು ಹೋದ ಆಂಬುಲೆನ್ಸ್ ನ ಆಕ್ಸಿಜನ್ ಕಿಟ್ ಸಿಡಿದು ಸಮಯ ವ್ಯರ್ಥವಾಗಿದ್ದು, ಮಾತ್ರವಲ್ಲ ಇವನಿಗೆ ಹಾವು ಕಚ್ಚಿದ ಪೊದರಿನ ಪಕ್ಕದಲ್ಲಿ ಅದೆಷ್ಟೋ ಬಾರಿ ಈತನ ಬಾಸ್ ಮತ್ತಿತರು ಹೋಗಿದ್ದರೂ ಅವರಿಗೆ ಬಾಧಿಸದ ‘ಡೆತ್ ವಾರೆಂಟ್’ ಇವನಿಗೆ ಬಾಧಿಸಿದ್ದು. ಬೆಳಿಗ್ಗೆ ಇದ್ದವ ಮಧ್ಯಾಹ್ನ ಇಲ್ಲ . ಇದೆಲ್ಲವೂ ಸಾವು ನಿಶ್ಚಯವಾದರೆ ಆ ಸಂದರ್ಭದಲ್ಲಿ ಬಂದೇ ಬರುತ್ತದೆ ಎಂಬುವುದಕ್ಕೆ ಸ್ಪಷ್ಟ ಉದಾಹರಣೆಗಳು. ದಿನಗಳು ಉರುಳಿದೆ. ಮನೆಯವರಿಗೆ, ಊರವರಿಗೆ, ಸ್ನೇಹಿತರಿಗೆ ಆತನ ನೆನಪುಗಳು ಮಾತ್ರ ಕಾಡುತ್ತಲೇ ಇವೆ.

ಜಾಹಿರಾತಿಗಾಗಿ ಸಂಪರ್ಕಿಸಿ : 8971596232

2 Comments

Leave a comment