ಸೈಕೋ!!

ಕಥೆ ಬರಹ : ಇಮ್ರಾನ್ ಪಾಂಡವರಕಲ್ಲು

“ಮನಸ್ಸೆಂಬುವುದು ಒಂದು ಅಗೋಚರ ಶಕ್ತಿ. ಮನಸ್ಸು ಒಬ್ಬಾತನನ್ನು ಒಬ್ಬಾಕೆಯಾಗಿ ಮಾಡುತ್ತದೆ. ಅದೇ ರೀತಿ ಒಬ್ಬಾಕೆಯನ್ನು ಒಬ್ಬಾತನನ್ನಾಗಿಯೂ ಮಾಡುತ್ತದೆ. ಮನಸ್ಸಾಗಿರುತ್ತದೆ ಒಬ್ಬ ಮನುಷ್ಯನ ನೈಜ ಶಕ್ತಿ ಕೇಂದ್ರ. ಮನುಷ್ಯನಿಗಾಗುವ ದುಃಖ ಮತ್ತು ಖುಷಿಗಳಿಗೆ ಮೂಲ ಮನಸ್ಸು. ಯಾವ ಪ್ರವೃತ್ತಿಯಲ್ಲಿ ಕಾರ್ಯೋನ್ಮುಖನಾಗಿರಬೇಕು ,ಯಾವುದರಲ್ಲಿ ಆಗಿರಬಾರದು ಎಂದು ನಿರ್ಧರಿಸುವುದು ಮನಸ್ಸು. ಕೆಲವೊಬ್ಬರಿಗೆ ಕೆಲವೊಂದು ಸಂದರ್ಭದಲ್ಲಿ ಭವಿಷ್ಯತ್ ಕಾಲದ ಮುನ್ಸೂಚನೆಯನ್ನೂ ನೀಡಲೂಬಹದು ಈ ಮನಸ್ಸು” ಎಂದು ಒಬ್ಬ ಮನೋವಿಜ್ಞಾನಿ ಸೈಕಾಲಜಿ ವಿಚಾರಕ್ಕೆ ಸಂಬಂಧಿಸಿದ್ದನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪರಿಪಾಠಗಳು, ಪಕ್ಕದ ಕೊಠಡಿಗೆ ಪೈಂಟ್ ಮಾಡಲು ಬಂದ ವಿಶಾಲ್ ನ ಕಿವಿಗೆ ಬಿತ್ತು.

ಮಾತ್ರವಲ್ಲ ಅದು ಅಂತರಾಳಕ್ಕೂ ಮುಟ್ಟಿತು. ಆ ಕುರಿತಾದ ಹಲವು ವಿಚಾರ ಧಾರೆಗಳನ್ನು ಅಧ್ಯಯನ ಮಾಡಲು ತೊಡಗಿದ ಈತ. ಮನಸ್ಸಿನ ಕುರಿತಾದ ಹೆಚ್ಚಿನ ಅಧ್ಯಯನಗಳನ್ನೂ ಮಾಡಿದ.

ಅವಿದ್ಯಾವಂತನಾಗಿದ್ದ ಈತ , ಬೇರೆ ಯಾವುದೇ ವಿಚಾರಕ್ಕೆ ನಿರುತ್ಸಾಹಿಯಾಗಿದ್ದ. ಮನಸ್ಸಿನ ಕುರಿತಾದ್ದ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುತ್ತಾನೆ. ಕೆಲವು ಪಂಡಿತರೊಂದಿಗೆ ವಿಷಯ ಹಂಚುತ್ತಾನೆ. ಈತನ ಪ್ರಯತ್ನವನ್ನು ನೋಡಿ ಆ ಪಂಡಿತರೂ ಅಚ್ಚರಿಯಾಗುತ್ತಾರೆ.

Advertisement
Advertisement

ಈತ ಮನೆಯಲ್ಲಿ ಮಲಗುವಾಗ, ಹೊರಡುವಾಗ, ಕೆಲಸ ಮಾಡುವಾಗ ಎಲ್ಲಾ ಸಂದರ್ಭದಲ್ಲೂ ಮನಸ್ಸಿನ ಕುರಿತಾದ ಆಳತ್ವದಲ್ಲಿರುತ್ತಾನೆ. ಮನಸ್ಸು ಯಾಕೆ ಹೀಗೆ? ಮನಸ್ಸಿನಲ್ಲಿ ಇಷ್ಟು ಶಕ್ತಿಯಿದೆಯಾ ? ಎಂದು ತನ್ನಲ್ಲಿ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಾನೆ.

ಹಲವು ದಿನಗಳ ಬಳಿಕ ಒಂದು ದಿನ ಹಲವು ಕಾಮಿಡಿಗಳನ್ನು ಮಾಡಿ, ಬಿದ್ದಂಬೀಳ ಎಂದ ಹಾಗೆ ತನ್ನ ಮನೆಯಲ್ಲಿರುವ ಎಲ್ಲಾ ಕುಟುಂಬದವರೂ ಬಿದ್ದೂ ಬಿದ್ದೂ ನಕ್ಕುತ್ತಾರೆ. ಡ್ಯಾನ್ಸ್, ಆ್ಯಕ್ಟಿಂಗ್ ನಾಟಕ ಮುಂತಾದವುಗಳನ್ನು ಮಾಡುವ ಮೂಲಕ ಅತೀ ಸಂತಸದಲ್ಲಿ ಕುಟುಂಬವಿರುತ್ತದೆ. ನಗುತ್ತಲೇ ತಾಯಿ ‘ಹೆಚ್ಚಾಗಿ ನಗುವುದು ಬೇಡ. ನಾಳೆ ಅಳಲಿಕ್ಕಿರಬಹುದು’ ಎಂದು ಮೆತ್ತನೆಯ ಶಬ್ದದಲ್ಲಿ ಹೇಳುತ್ತಾಳೆ. ಎಲ್ಲರೂ ಇದನ್ನು ಅಲ್ಲಗಳೆದರೂ ವಿಶಾಲ್ ಮಾತ್ರ ಈ ಮಾತನ್ನು ಅಂತರಾಳದಲ್ಲಿ ಬಿಗಿಯಾಗಿ ಹಿಡಿದು ಕೊಳ್ಳುತ್ತಾನೆ.

ಆ ಕ್ಷಣದ ನಂತರ ‘ ನಾಳೆ ಏನಾಗಬಹುದು ನಮಗೆ, ಯಾವ ಕಹಿ ಘಟನೆ ನಡೆಯಬಹುದು’ ಎಂದು ಮನಸ್ಸಿನಲ್ಲಿ ಹಲವು ಆತಂಕದ ಪ್ರಶ್ನೆಗಳು ಮೂಡುತ್ತಲೇ ಇರುತ್ತದೆ. ಈಗಾಗಲೇ ಈತ ಮನಸ್ಸಿನ ಕುರಿತಾದ ಅಧ್ಯಯನದಲ್ಲಿ ನಿರತನಾಗಿದ್ದನು. ಅದಕ್ಕೆ ಈ ಘಟನೆ ಇನ್ನಷ್ಟು ಪುಷ್ಠಿ ನೀಡಿದಂತಾಯಿತು. ನಕರಾತ್ಮಕ ಚಿಂತನೆಯಲ್ಲಿ ಮಗ್ನನಾಗಿರುತ್ತಾನೆ.

ಅಂದು ಮಲಗುವಾಗ ತನ್ನ ಮನಸ್ಸಿಗೆ ಆವಾಗ ಆವಾಗ ಒಂದು ಕಹಿ ಘಟನೆಯ ಸಂಭವನೀಯತೆಯ ಭಾವನೆ ಮತ್ತೆ ಮತ್ತೆ ಬರುತ್ತಿತ್ತು. ಅದೇನೆಂದರೆ ನಾಳೆ ಈತನ ತಂಗಿ ಅಪಘಾತದಲ್ಲಿ ಸಾಯುತ್ತಾಳೆ ಎಂಬುವುದರ ಕುರಿತು.
ಮನಸ್ಸಿನಲ್ಲಿ ಭಾವಿಸಿದ್ದು ನಿಜವಾಗಿ ಸಂಭವಿಸುತ್ತದಾ? ಹಾಗೆ ಆಗದಿದ್ದರೆ ಸಾಕು ಎಂದು ಭಾವಿಸಿದರೂ ಈತನ ಮನದಲ್ಲಿ ನಕರಾತ್ಮಕ ಆಲೋಚನೆಗಳೇ ಮುಳುಗಿ ಹೋಗಿದ್ದವು. ಕೊನೆಗೆ ತಾನೇ ಅಳುತ್ತಾನೆ. ಹೀಗೆ ನಾಳೆ ಸಂಭವಿಸುವುದು ಬೇಡ ಬೇಡ ಎಂದು.

ತಾಯಿ ಮಡಿಲಿಗೆ ಹೋಗಿ ಜೋರಾಗಿ ಅಳುತ್ತಾನೆ. ತನಗಾದ ಆಲೋಚನೆಯನ್ನು ಹಂಚುತ್ತಾನೆ. ತನಗಾಗುವ ಗಾಬರಿಯನ್ನು ಹೇಳುತ್ತಾನೆ. ಒಂದು ಕ್ಷಣಕ್ಕೆ ಅವರೂ ಗಾಬರಿಯಾದರು. ಅವನು ಆವಾಗ ಆವಾಗ “ತಂಗಿ ನಾಳೆ ಸಾಯುತ್ತಾಳೆ. ತಂಗಿ ನಾಳೆ ಸಾಯುತ್ತಾಳೆ. ನನ್ನ ಮನಸ್ಸಿಗೆ ಹಾಗೆ ಆಗುತ್ತಿದೆ. ನಾಳೆ ಒಂದು ಕಹಿ ಘಟನೆ ಸಂಭವಿಸುತ್ತದೆ. ನಾಳೆ ನಾವು ಅಳಲಿಕ್ಕೆ ಇದೆ.” ಎಂದು ಅತ್ತು ಅತ್ತು ಬೊಬ್ಬೆ ಇಡುತ್ತಾನೆ.

ಇದನ್ನು ನೋಡುತ್ತಿರುವ ತನ್ನ ಕುಟುಂಬದವರು ಇನ್ನೂ ಆತಂಕಕ್ಕೊಳಗಾಗುತ್ತಾರೆ.

ಈತನಿಗೆ ನೀರು ಕುಡಿಸಿ, ಸಮಾಧಾನ ಪಡಿಸಿ, ಸಕರಾತ್ಮಕ ಧೈರ್ಯವನ್ನು ನೀಡಿ ಅವನನ್ನು ಮಲಗಿಸುತ್ತಾರೆ. ಈತ ಆತಂಕದಲ್ಲಿಯೇ ನಿದ್ರೆಗೆ ಜಾರುತ್ತಾನೆ.

ಬೆಳಿಗ್ಗೆ 9 ಗಂಟೆಯಾದರೂ ಈತ ಏಳುತ್ತಿಲ್ಲ. ತಾಯಿ ಬಂದು ಎಬ್ಬಿಸುವಾಗ ಈತ ಉಸಿರು ಕಟ್ಟಿದ ರೀತಿಯಲ್ಲಿ ಮಲಗಿರುತ್ತಾನೆ. ತಾಯಿ ನಿಬ್ಬೆರಗಾಗುತ್ತಾಳೆ. ಈತನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಆಸ್ಪತ್ರೆಗೆ ದಾಖಲಿಸಿದರೂ ಈತನ ಜೀವ ಉಳಿಸಲು ಸಾಧ್ಯವಾಗಿಲ್ಲ. ಡಾಕ್ಟರ್ ಈತ ಸತ್ತು ಹೋಗಿದ್ದಾನೆ ಎಂದು ಹೇಳಿದ್ದೇ ತಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುತ್ತದೆ.

ನಿನ್ನೆ ನಾನು ಹೇಳಿದ ಅಳು ಈ ರೀತಿಯಲ್ಲಿ ಬಂದೊದಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ತಾಯಿ ಕೊರಗಿ ಕೊರಗಿ ಅಳುತ್ತಾಳೆ. ಪೋಸ್ಟ್ ಮಾಟಂ ಬಳಿಕ ವರದಿಯಲ್ಲಿ ಈತ ಮನಸ್ಸಿನಲ್ಲಿ ಏನೋ ಕಲ್ಪನೆಗೆ ಆಳವಾಗಿದ್ದುಕೊಂಡು ,ಭಯದಲ್ಲಿ ಹೃದಯಾಘಾತಗೊಂಡು ತೀರಿದ್ದಾನೆ ಎಂದು ಉಲ್ಲೇಖವಾಗುತ್ತದೆ.

ಮನಸ್ಸಿನ ಕುರಿತಾದ ಶಕ್ತಿಯನ್ನು ದುರ್ವ್ಯಾಖ್ಯಾನದೊಂದಿಗೆ ನಕರಾತ್ಮಕ ಚಿತ್ತದಲ್ಲಿ ಅರ್ಥೈಸುವವರಿಗೆ ಇದೊಂದು ಕಾಯಿಲೆಯಾಗಿಯೇ ಬಂದೊದಗುತ್ತದೆ ಎಂಬುವುದು ಈ ಘಟನೆಯಲ್ಲಿರುವ ಪರಿಪಾಠ ಎಂದು ಇದನ್ನರಿತ ಮೇಲೆ ತಿಳಿಸಿದ ಅದೇ ಮನೋವಿಜ್ಞಾನಿ ವಿದ್ಯಾರ್ಥಿಗಳಿಗೆ ಮತ್ತೆ ಬೋಧಿಸುತ್ತಾನೆ.

Leave a comment