
ನಂಬಿಕೆ ಮನುಷ್ಯನನ್ನು ರಕ್ಷಿಸುವುದೇ? ಖಂಡಿತವಾಗಿಯೂ ರಕ್ಷಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮನುಷ್ಯನ ಜೀವನವೇ ನಂಬಿಕೆಯ ಮೇಲೆ ನಿಂತಿದೆ. ನಾಳೆ ಉಜ್ವಲವಾಗಿರುತ್ತದೆಂಬ ನಂಬಿಕೆಯೇ ಮನುಷ್ಯನನ್ನು ಬದುಕಿಸಿ ಮುನ್ನಡೆಸುತ್ತದೆ. ನಂಬಿಕೆ ಇಲ್ಲದಿದ್ದರೆ ಮನುಷ್ಯನ ಜೀವನ ಶೂನ್ಯವಾಗಿ ಹೋಗುತ್ತದೆ. ‘ ನಾನು ಸಿ ಎಮ್ ಆಗುತ್ತೇನೆ’ ‘ನಾನು ಖ್ಯಾತ ಲೇಖಕನಾಗುತ್ತೇನೆ ‘ ‘ ನಾನು ಮದುವೆಯಾಗುವ ಹುಡುಗಿ ಬಹಳ ಅಂದವಾಗಿರುತ್ತಾಳೆ’ ‘ ನಾನು ಬಯಸಿದ ಉದ್ಯೋಗವನ್ನು ಪಡೆದುಕೊಳ್ಳುತ್ತೇನೆ’ ಇವೆಲ್ಲಾ ಏನು ? ನಂಬಿಕೆಗಳೇ ಅಲ್ಲವೇ! ಇಂದಿನ ನಂಬಿಕೆಯೇ ನಾಳಿನ ವಾಸ್ತವ. ಆದ್ದರಿಂದ ಬಲವಾಗಿ ನಂಬಿ, ಅದನ್ನು ವಾಸ್ತವವಾಗಿ ಮಾರ್ಪಾಡಿಸಿಕೊಳ್ಳಿ.

ಅಮಿತಾಬ್ ಬಚ್ಚನ್ ,ರಜನೀಕಾಂತ್, ಡಾ ರಾಜ್ ಕುಮಾರ್ ಅಲ್ಲದೇ ಇತರರು ಟ್ಯಾಲೆಂಟೆಡ್ ವ್ಯಕ್ತಿಗಳು ಪ್ರಪಂಚದಲ್ಲಿ ಇಲ್ಲವೆನ್ನುವಿರಾ? ಹಾಗಾದರೆ ಅವರೇ ಯಾವ ರೀತಿಯಲ್ಲಿ ಸೂಪರ್ ಸ್ಟಾರ್ ಮಾಡಿದೆ. ನಿಮ್ಮಲ್ಲಿ ಎಷ್ಟೇ ಸಾಮರ್ಥ್ಯ ಪ್ರತಿಭೆಗಳಿದ್ದರೂ ಸಹ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ ನಿಮ್ಮ ಟ್ಯಾಲೆಂಟ್ ವ್ಯರ್ಥವಾಗುತ್ತದೆ. ನಿಮ್ಮನ್ನು ನೀವು ಬಲವಾಗಿ ನಂಬಲು ಪ್ರಾರಂಭಿಸಿದರೆ ನಿಮ್ಮಲ್ಲಿ ಅಲ್ಲಿಯವರೆಗೂ ಇರದಿದ್ದ ಟ್ಯಾಲೆಂಟ್ಸ್ ಹೊಸದಾಗಿ ಹುಟ್ಟಿ ಬರುತ್ತದೆ.
ಪಾಸಿಟಿವ್ ನಂಬಿಕೆಯೇ ನಮಗೆ ಉತ್ಸಾಹ, ಪ್ರೇರಣೆ ಕೊಡುತ್ತದೆ. ಶಾಲೆಗಳಲ್ಲಿ ಯುನಿವರ್ಸಿಟಿಗಳಲ್ಲಿ ನಾಳೆಯ ಮೇಲಿನ ನಂಬಿಕೆಗಳಿಂದಲೇ ಲಕ್ಷಗಟ್ಟಲೆ ಬಾಲಕರು, ಯುವಕರು ಓದುತ್ತಿದ್ದಾರೆ. ‘ ಓದಿದರೂ ಅಷ್ಟೆ, ಕೆಲಸಗಳು ಸಿಗವು’ ಎನ್ನುವ ಫೀಲಿಂಗ್ ಇದ್ದರೆ ಮೊದಲಿನಿಂದ ಓದಿನ ಮೇಲೆ ಅನಾಸಕ್ತಿ ಮೂಡುತ್ತದೆ. ‘ ನಾನು ಒಳ್ಳೆಯ ಉದ್ಯೋಗ ಪಡೆದೇ ಪಡೆಯುತ್ತೇನೆ’ ಎಂಬ ನಂಬಿಕೆಯೇ ಒಬ್ಬನನ್ನು ಕಾಂಪಿಟಿವ್ ಎಕ್ಸಾಮ್ ಬರೆಯಲು ಪ್ರೇರಣೆ ನೀಡುತ್ತದೆ.

ಎಷ್ಟೋ ಹಾಸ್ಪಿಟಲ್ ಗಳಲ್ಲಿ ಎಷ್ಟೋ ಜನ ರೋಗಿಗಳು ಬಗೆ ಬಗೆಯ ರೋಗಗಳಿಗೆ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ‘ ನಮ್ಮ ರೋಗ ತಪ್ಪದೆ ವಾಸಿಯಾಗುತ್ತದೆ… ನಾವು ಮತ್ತೆ ಆರೋಗ್ಯವಾಗಿ ,ಆನಂದವಾಗಿ ಜೀವಿಸುತ್ತೇವೆ’ ಎಂಬ ನಂಬಿಕೆಯೇ ಎಷ್ಟೋ ಜನ ರೋಗಿಗಳನ್ನು ಬದುಕಿಸುತ್ತದೆ. ಅದು ಬಿಟ್ಟು ‘ ನಿನ್ನೆ ಹಾಸ್ಪಿಟಲ್ ಪಕ್ಕದ ವಾರ್ಡಿನಲ್ಲಿ ಯಾರೋ ಸತ್ತುಹೋದರು. ನಾನು ಕೂಡಾ ಸತ್ತುಹೋಗುವೆನೇ? ಎಂಬ ನೆಗೆಟಿವ್ ಆಲೋಚನೆ ಒಬ್ಬ ರೋಗಿಗೆ ಬಂದರೆ ಆತನ ಜೀವನ ದುರ್ಭರವಾಗುತ್ತದೋ ಒಮ್ಮೆ ಯೋಚಿಸಿ ನೋಡಿ.
ಆದ್ದರಿಂದ ಜೀವನದಲ್ಲಿ ಅದು, ಓದು, ಆರೋಗ್ಯ, ಹಣಕಾಸು, ಸಂಸಾರ ಆಟಗಳು ,ಕಲೆ, ಸಾಹಿತ್ಯ, ಸಮಾಜ ಸೇವೆ, ರಾಜಕೀಯ, ಸಂಶೋಧನೆ, ಪ್ರೇಮ, ವ್ಯವಹಾರಗಳು ಯಾವುದೇ ಆಗಲಿ ಕೇವಲ ಪಾಸಿಟಿವ್ ಆಲೋಚನಾ ವಿಧಾನ ಮಾತ್ರ ನಮ್ಮ ಜೀವನವನ್ನು ಅರ್ಥ ಪೂರ್ಣವನ್ನಾಗಿ ಮಾಡುತ್ತದೆ. ಸಕರಾತ್ಮಕ ನಂಬಿಕೆಯೇ ಜೀವನದ ಆಕ್ಸಿಜನ್. ನಂಬಿಕೆಯೇ ನಮ್ಮ ಜೀವನದ ಬುನಾದಿ. ಬಲವಾದ ನಂಬಿಕೆಯೇ ನಮ್ಮ ಪಾಲಿನ ಡಾಕ್ಟರ್.
ನಮ್ಮ ಆರೋಗ್ಯಕ್ಕೂ ,ನಮ್ಮ ಆಲೋಚನೆಗಳಿಗೂ ನಿಕಟ ಸಂಬಂಧವಿದೆ. ಪಾಸಿಟಿವ್ ಆಲೋಚನಾ ಶಕ್ತಿ ನಮ್ಮಲ್ಲಿದ್ದರೆ ಆರೋಗ್ಯ ಅದ್ಭುತವಾಗಿರುತ್ತದೆ. ಅನಾರೋಗ್ಯ ಮಾಯವಾಗಲು ಸಕರಾತ್ಮಕ ನಂಬಿಕೆಯೇ ಸಾಕು. ವಾಸಿಯಾಗಲು ಕೆಲವೊಂದು ಸಂದರ್ಭದಲ್ಲಿ ಅಲ್ಪ ಸಮಯ ತೆಗೆದುಕೊಳ್ಳಬಹುದು.
ನಿಜವಾಗಿಯೂ ನಾವು ತುಂಬಾ ಆಳವಾಗಿ ಆಲೋಚಿಸಿದರೆ, ಈ ಪ್ರಕೃತಿಯಲ್ಲಿ ಎಲ್ಲವೂ ಪಾಸಿಟಿವ್ ಆಗಿಯೇ ಸ್ಪಂದಿಸುತ್ತದೆ. ಮನುಷ್ಯನೊಬ್ಬನೇ ನೆಗೆಟಿವ್ ಆಲೋಚನೆಗಳನ್ನು ಹೊಂದಿರುವುದು. ಅದಕ್ಕೇ ಈ ಪ್ರಕೃತಿಯಲ್ಲಿ ಎಷ್ಟು ತೊಂದರೆಗಳು, ಘರ್ಷಣೆಗಳು, ಸಮಸ್ಯೆಗಳು, ಅನಾರೋಗ್ಯ, ಅತೃಪ್ತಿ ದುಃಖಗಳಿಂದ ಬಾಧೆಪಡುವ ಏಕೈಕ ಪ್ರಾಣಿ ಕೇವಲ ಮನುಷ್ಯ ಮಾತ್ರ.
ಬಲವಾದ ನಂಬಿಕೆ ಮತ್ತು ಪಾಸಿಟಿವ್ ಆಲೋಚನೆಗಳು ಒಂದು ಅಗೋಚರ ಶಕ್ತಿಯೆಂದು ಪರಿಗಣಿಸಬಹುದು. ಯಾಕೆಂದರೆ ತೀವ್ರ ಬಾಧೆಗೆ ಒಳಪಟ್ಟಾಗ ಅದೆಷ್ಟೋ ಮಂದಿ ಬಲವಾದ ನಂಬಿಕೆ ಮತ್ತು ಪಾಸಿಟಿವ್ ಆಲೋಚನೆಗಳಿಂದ ಆ ಸಮಸ್ಯೆಗಳ ಆಗರದಿಂದ ಮುಕ್ತಿ ಹೊಂದಿದ್ದು ಇದೆ. ಮನುಷ್ಯ ಎದುರಿಸುವ ಎಲ್ಲಾ ಸಮಸ್ಯೆಗಳಿಗೆ ಮನುಷ್ಯನ ಬಳಿಯೇ ಪರಿಹಾರ ಇದೆ. ಅದನ್ನು ಕಂಡುಕೊಳ್ಳುವಲ್ಲಿ ಅಥವಾ ಪತ್ತೆಹಚ್ಚುವಲ್ಲಿ ವಿಫಲಗೊಳ್ಳುತ್ತಾನೆ.
ಬಲವಾದ ನಂಬಿಕೆ ಮತ್ತು ಪಾಸಿಟವ್ ಆಲೋಚನೆ ಮಾಡುವುದಕ್ಕೂ ಮತ್ತು ಆತನ ಮಿತಿ ಮೀರಿದ ಸಾಮರ್ಥ್ಯಕ್ಕೂ ಸಂಬಂಧವಿದೆ. ಆತನ ಬಳಿ ಪ್ರಯತ್ನ ಮೀರಿದ ಒಂದು ಕಂಡುಕೊಳ್ಳುವ ಸಾಮರ್ಥ್ಯ ವಿದ್ದರೆ ಮಾತ್ರ ಈ ಮೇಲಿನ ಬಲವಾದ ನಂಬಿಕೆ ಮತ್ತು ಪಾಸಿಟಿವ್ ಆಲೋಚನೆಗಳು ಕಾರ್ಯಾಚರಿಸುತ್ತದೆ. ಆತನ ಬಳಿ ಪಾಸಿಟಿವ್ ಆಲೋಚನೆ ಮತ್ತು ಬಲವಾದ ನಂಬಿಕೆಯನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ವಿಲ್ಲದೇ ಇದ್ದರೆ ಅದು ಅಸಾಧ್ಯ. ಆದರೆ ಇದರ ಜೊತೆಗೆ ಇನ್ನೊಂದು ಹೇಳ ಬಯಸಲು ಇಚ್ಛಿಸುತ್ತೇನೆ. ಆತನ ಸಾಮರ್ಥ್ಯವನ್ನು ಅವನೇ ತೀರ್ಮಾನಿಸುವಂಥದ್ದು. ಸಾಮರ್ಥ್ಯದ ದೃಷ್ಟಿ ಮತ್ತು ಸೃಷ್ಟಿ ಮನುಷ್ಯನ ಕೈಯಲ್ಲೇ ಇದೆ.
ಬಲವಾದ ನಂಬಿಕೆ ಇಡುವಾಗ, ಪಾಸಿಟಿವ್ ಆಲೋಚನಗೆಳು ಮಾಡುವಾಗ ಸಾರ್ವಕಾಲಿಕವಾಗಿಯೂ ಅಸಾಧ್ಯವಾಗಿರುವ ಚಿತ್ತ ಇರಬಾರದು. To be Practical ಎಂಬಂತಿರಬೇಕು.
ಒಂದು ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವ ಸರ್ವ ಪ್ರಯತ್ನಗಳನ್ನು ಮಾಡಬೇಕು. ಅದಕ್ಕೇ ವ್ಯಯಿಸಿದ ಮಿತಿ ಮೀರಿದ ಪ್ರಯತ್ನವೇ ಅದರ ಮುಕ್ಕಾಲು ಭಾಗ ರಿಸಲ್ಟ್.
ಬರಹ: ಇಮ್ರಾನ್ ಪಾಂಡವರಕಲ್ಲು ಮತ್ತು ಕೆಲವು ಆಯ್ದ ಸಂಗ್ರಹಗಳು