ಸೂಸೈಡ್!!!!

ನಮ್ಮ ಇಂದಿನ ಕಥಾ ನಾಯಕ ರೋಶನ್.ರೋಶನ್ ಒಂದು ಕಂಪೆನಿಯಲ್ಲಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾತ್ರವಲ್ಲ ಚೆನ್ನಾಗಿ ದುಡಿಯುತ್ತಿದ್ದ.ಒಂದು ರೂಪಾಯಿ ಸಾಲವೂ ಇರಲಿಲ್ಲ.ಸುಂದರ ಜೀವನ ಅನುಭವಿಸುತ್ತಿದ್ದ.ಬ್ರಾಂಡೆಡ್ ಕಾರು, ವಾಚ್,ಫೋನ್,ಚಪ್ಪಲ್,ಅಂಗಿ ವಸ್ತ್ರಗಳು ಹೀಗೆ ಧರಿಸುತ್ತಿದ್ದ.ಮನೆಯಲ್ಲಿ ಎಕ್ಕರೆಗಳಷ್ಟು ತೋಟವಿತ್ತು.ತಂದೆ ಒಬ್ಬ ತೋಟಗಾರನಾಗಿದ್ದ.ತಾಯಿ ಮನೆಯಲ್ಲೇ ಕುಟುಂಬವನ್ನು ನಿರ್ವಹಿಸುತ್ತಿದ್ದಳು.ತಂಗಿಯಂದಿರು ಕಾಲೇಜು ಅಧ್ಯಯನ ಮಾಡುತ್ತಿದ್ದರು.ಜೀವನ ತುಂಬಾ ಖುಷಿಯಲ್ಲೇ ಸಾಗುತ್ತಿತ್ತು.ಕಷ್ಟ -ನೋವು ಎಂದರೆ ಹೇಗಿರುತ್ತದೆ ಎನ್ನುವ ರುಚಿಯ ಅನುಭವವೇ ಈ ರೋಶನ್ ಗೆ ಇಲ್ಲ.ಐಶಾರಾಮಿ ಮನೆಯೊಂದಿಗೆ ಐಶಾರಾಮಿ ಜೀವನ ಸಾಗಿಸುತ್ತಿದ್ದ.ತೃಪ್ತಿದಾಯಕವಾದ ಆರೋಗ್ಯವನ್ನೂ ಹೊಂದಿದ್ದ.ಹೀಗೆ ಸಂತೋಷದ ದಿನಗಳು ಉರುಳುತ್ತಿದ್ದವು.

ಒಂದು ದಿನ ರಾತ್ರಿ ಸಡ್ಡೆನ್ ಆಗಿ ತಂದೆಗೆ ಎದೆಯಲ್ಲಿ ನೋವುಂಟಾಗಲು ಸಂಭವಿಸಿತು.ತಂದೆ ಕಿರುಚಾಡಲು ಶುರುಮಾಡಿದರು.ರೋಶನ್ ಆಫೀಸ್ ಕಾರ್ಯದ ನಿಮಿತ್ತ ಮನೆಯಲ್ಲಿರಲಿಲ್ಲ.ಗಾಬರಿಯಿಂದ ತಾಯಿ ಮತ್ತು ತಂಗಿಯಂದಿರು ಆತಂಕಕ್ಕೊಳಗಾದರು.ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು.ಫೋನ್ ತಾಗುತ್ತಿಲ್ಲ.ವಿಷಯ ತಿಳಿದ ರೋಶನ್ ಮನೆಗೆ ಬರುತ್ತಾನೆ.ಆದರೆ ಬರುವ ಹೊತ್ತಿನಲ್ಲಿ ತಂದೆ ಹೃದಯಾಘಾತದಿಂದ ಮರಣಹೊಂದಿರುತ್ತಾರೆ.

Advertisement
Advertisement
Advertisement

ತಂದೆಯ ನಗು ರೋಶನ್ ಗೆ ನೆನಪಾಗುತ್ತಿದೆ.ಜೋರಾಗಿ ಅತ್ತು ಬಿಡುತ್ತಾನೆ.ಕುಟುಂಬದವರ ರೋದನ ಹೆಚ್ಚಾಗುತ್ತದೆ.ರೋಶನ್ ಕಣ್ಣೀರು ಮತ್ತು ಬೆವರಿನಲ್ಲಿ ಬೆಂದು ಹೋಗುತ್ತಾನೆ.ಇಷ್ಟರವರೆಗೆ ಅನುಭವಿಸದೇ ಇದ್ದ ನೋವು-ಕಷ್ಟದ ಮೊದಲ ಹಂತ ಇವನು ಅನುಭವಿಸುತ್ತಾನೆ.

ದಿನಗಳು ಉರುಳುತ್ತದೆ.ತಂದೆಯ ಮರಣದ ನಾಲ್ಕು ದಿನಗಳ ನಂತರ ಏನೋ ವಿದ್ಯುತ್ ಶಾರ್ಟ್ ನಿಂದ 10 ಎಕ್ಕರೆ ತೋಟದ ಮುಕ್ಕಾಲು ಭಾಗ ಬೆಂಕಿ ದುರಂತದಿಂದ ಸುಟ್ಟು ಹೋಯಿತು.ಎಷ್ಟು ನೀರೆರಚಿದರೂ ಬೆಂಕಿ ನಂದಲಿಲ್ಲ.ಮುಕ್ಕಾಲು ಭಾಗ ಬೂದಿಯಾಯಿತು.ಅದರೊಟ್ಟಿಗೆ ತಂದೆಗಿದ್ದ ಸ್ಕೂಟಿಯೂ,ಅದರ ಒಳಗಿದ್ದ ತೋಟದ ಇನ್ಸೂರೆನ್ಸ್ ಡಾಕ್ಯುಮೆಂಟ್ ಕೂಡ ಬೂದಿಯಾಯಿತು.
ರೋಶನ್ ಕಣ್ಣಿನಲ್ಲಿ ಕಣ್ಣೀರು ತುಂಬಿ ತುಳುಕತೊಡಗಿತು.ಕಾಲು ಭಾಗದಷ್ಟು ಇರುವ ಭೂಮಿ ಬರಡು ಭೂಮಿಯಾಗಿತ್ತು.ನೋವು-ಕಷ್ಟದ ಎರಡನೇ ಹಂತಕ್ಕೆ ರೋಶನ್ ದಾಪುಗಾಲಿಟ್ಟ.
ಇದು ನಡೆದ ಕೆಲ ದಿನಗಳ ನಂತರ ಅವನಿದ್ದ ಕಂಪೆನಿಗೆ ನಷ್ಟದ ಮೇಲೆ ನಷ್ಟ ಸಂಭವಿಸಿತು.ಇವನನ್ನು ಸೇರಿಸಿ 10 ಮಂದಿಯನ್ನು ಕೆಲಸದಿಂದ ಹೊರಹಾಕಿದರು.ರೋಶನ್ ಬೀದಿಗೆ ಬಂದ.ಆತಂಕ,ನೋವು ತಾರಕಕ್ಕೇರಿತು.
ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರಿಯತಮೆ,ಸ್ನೇಹಿತರು ಸಹಾಯಕ್ಕೆ ಬರದೆ ಎಲ್ಲರೂ ಇವನ ಕೈ ಬಿಟ್ಟರು.ಮನೆಯಲ್ಲಿ ದಿನಾಲೂ ಕಣ್ಣೀರು.
ಕಷ್ಟ-ನೋವಿನ ಮುಂದಿನ ಹಂತಕ್ಕೆ ರೋಶನ್ ಕಾಲಿಟ್ಟ.

ಎಷ್ಟೇ ಕೆಲಸ ಹುಡುಕಿದರೂ ಒಂದೂ ಫಲಿಸಲಿಲ್ಲ.ಇವನಿಗೆ ಹಣವನ್ನು ಠೇವಣಿ ಮಾಡಿ ಗೊತ್ತಿಲ್ಲ.ಸ್ವಲ್ಪ ಕೂಡಿಟ್ಟಿದ್ದ ಹಣವೆಲ್ಲವೂ ಖರ್ಚಾಗಿ ಹೋಯಿತು.ಗ್ಯಾಸ್ ಖಾಲಿ.ಕರೆಂಟ್ ಬಿಲ್,ನೀರಿನ ಬಿಲ್ ಕಟ್ಟಿಲ್ಲ. ಇದರಿಂದ ನೀರು,ವಿದ್ಯುತ್ ಪೂರೈಕೆಗಳೂ ಕಟ್ ಆಯಿತು.ಅಕ್ಕಪಕ್ಕದವರ ಸಹಾಯವೂ ಸಾಕಾಗುತ್ತಿಲ್ಲ.ಮುಂದಿನ ವಿದ್ಯಾಭ್ಯಾಸಕ್ಕೆ ದುಡ್ಡಿಲ್ಲದೆ ಕಾಲೇಜು ಹೋಗದೆ ತಂಗಿಯಂದಿರು ಮನೆಯಲ್ಲಿ ಬಾಕಿಯಾದರು.ತಂಗಿಯಂದಿರಿಗೆ ವಯಸ್ಸಾಯಿತು.ಮದುವೆ ಮಾಡಲಿಕ್ಕೂ ಕೈ ಯಲ್ಲೇನೂ ಇಲ್ಲ.ಕಷ್ಟ-ನೋವು-ಅಳು-ಭೀತಿಗಳ ಸುರಿಮಲೆಯೇ ರೋಶನ್ ಮೇಲೆ ಬಿತ್ತು.

ರಾತ್ರಿ ಏಕಾಂತದಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಾನೆ.ನನಗೆ ಇನ್ನು ಇದನ್ನು ಎದುರಿಸಲು ಸಾಧ್ಯವಿಲ್ಲ ಎಂದು ನದಿಗೆ ಹಾರಬೇಕೆಂಬ ಆತ್ಮಹತ್ಯೆಯ ತೀರ್ಮಾನಕ್ಕೆ ಬರುತ್ತಾನೆ.ಈ ಲೋಕವನ್ನೇ ಬಿಟ್ಟು ಹೋಗಬೇಕು ಎಂದು ಯಾರಿಗೂ ಗೊತ್ತಿಲ್ಲದೆ ಬೆಳಿಗ್ಗೆಯ ಹೊತ್ತಿನಲ್ಲಿ ಸ್ಥಳೀಯ ಬ್ರಿಡ್ಜ್ ಬಳಿಗೆ ಹೋಗುತ್ತಾನೆ.

ಒಂದು ಕಡೆಯಲ್ಲಿ ಕಾರು ನಿಲ್ಲಿಸಿ,ಕಾರಿನಲ್ಲಿ ಒಂದು ಲೆಟರ್ ಬರೆದಿಟ್ಟು ಹೋಗುತ್ತಾನೆ.ಮನದೊಳಗೆಯೇ ಜೋರಾಗಿ ಅಳುತ್ತಾ ಹೀಗೇ ಮುಂದುವರಿಯುತ್ತಾನೆ.

ನಡೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಒಂದು ಕಡೆಯಲ್ಲಿ ಬೇಡುವ ಸ್ಥಿತಿಯಲ್ಲಿ ಒಬ್ಬ ತೀರಾ ಭಿಕ್ಷುಕನನ್ನು ನೋಡುತ್ತಾನೆ. ಅದರ ಪಕ್ಕದಲ್ಲಿ ನಾಲ್ಕು ಯುವಕರು ಒಟ್ಟು ಸೇರಿ ಹುಚ್ಚಾಟ ಆಡುತ್ತಿರುವುದನ್ನು ನೋಡುತ್ತಾನೆ.ಮನಸ್ಸಲ್ಲಿ ಏನೋ ಒಂದು ಚಂಚಲ. ಮುಂದೆ ಹೋಗುತ್ತಾನೆ.ಅಲ್ಲೊಂದು ಕಡೆಯಲ್ಲಿ ವಯಸ್ಸಾದ ಅಜ್ಜ ತನ್ನ ಮೊಮ್ಮಗಳನ್ನು ಮಂದಹಾಸದಿಂದ ಸೈಕಲ್ ನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾನೆ.ಇತ್ತ ಕಡೆ ಇಬ್ಬರು ಕಷ್ಟಪಟ್ಟು ಡಾಂಬರ್ ಕೆಲಸ ಮಾಡುತ್ತಿದ್ದಾರೆ.ಅತ್ತ ಕಡೆ ಒಂದು ಕಾಲು ತುಂಡಾದ ನಾಯಿಯ ಚಲನೆಯನ್ನು ಗಮನಿಸುತ್ತಾನೆ.ಅದರ ಪಕ್ಕದಲ್ಲಿ ಒಬ್ಬ ಕುರುಡ ದಾರಿ ಸಾಗುತ್ತಿರುವುದನ್ನು ನೋಡುತ್ತಾನೆ.ಒಂದು ಕಡೆಯಲ್ಲಿ ಕುಟುಂಬವೊಂದು ತಿಂಡಿ-ತಿನಿಸುಗಳನ್ನು ತಿನ್ನುವ ಮೂಲಕ ಎಂಜಾಯ್ ಮಾಡುತ್ತಿರುವುದನ್ನೂ ನೋಡುತ್ತಾನೆ.ಒಬ್ಬ ಕಡು ಬಡವ ಬಿಸಿಲಿನಲ್ಲಿ ಹಾರೆ ಹಾಕುತ್ತಿದ್ದಾನೆ.
ಇದನ್ನೆಲ್ಲಾ ಗಮನಿಸಿಕೊಂಡ ಇವನಿಗೆ ಚಂಚಲ ಜೋರಾಗತೊಡಗಿತು.ಏನಾದರೂ ನಾನು ಇಂದು ಆತ್ಮ ಹತ್ಯೆ ಮಾಡಿಕೊಳ್ಳವುದೇ ಎಂದು ಮರು ತೀರ್ಮಾನಿಸುತ್ತಾನೆ.ಅಂತು ಇಂತೂ ಬ್ರಿಡ್ಜ್ ಬಳಿ ಬಂದು ತಲುಪಿದ.ಎದುರುಗಡೆ ವಿಶಾಲ ನೀರು ಇದೆ.ಗಾಬರಿಯಾಗುತ್ತಾ ಇದೆ.ಇವನನ್ಯಾರೂ ಗಮನಿಸುತ್ತಿಲ್ಲ.ಕಣ್ಣು ಮುಚ್ಚಿಕೊಂಡು ಹಾರಿಯೇ ಬಿಟ್ಟ. ಕ್ಷಮಿಸಿ,ಕ್ಷಮಿಸಿ ಹಾರಲಿಲ್ಲ. ಹಾರಬೇಕು ಎನ್ನುವಷ್ಟರಲ್ಲಿ ಒಂದು ಸೊಳ್ಳೆ ಬಂದು ಕಚ್ಚಿತು.ಮುಂದೆ ಸಾವಿದ್ದರೂ ಕೂಡ ಆ ಸೊಳ್ಳೆಯನ್ನು ಹೊಡೆದು ಕೊಲ್ಲಲು ಕಣ್ತೆರೆದ.ಅವನು ಆ ಕ್ಷಣದಲ್ಲಿ ದೂರದಲ್ಲಿ ಒಬ್ಬ ಮಂದಹಾಸದಿಂದ,ಹಾಡುಹಾಡುತ್ತಾ ಚಹಾ ಮಾರುತ್ತಿರುವ ಮಾಲಕನನ್ನು ಕಂಡ.ಚಹಾ ಮಾಲಕನು,ಚಹಾ ಬೇಕಾ?ಬನ್ನಿ ಬನ್ನಿ ಸರ್. ಎಂದು ಅಲ್ಲಿರುವ ಜನರೊಂದಿಗೆ ಕೇಳಿಕೊಳ್ಳುತ್ತಿದ್ದ.ಖುಷಿ ಖುಷಿಯಿಂದ ಜನರೊಂದಿಗೆ ಬೆರೆಯುತ್ತಿದ್ದ.ಇವನಿಗೆ ಮನದಲ್ಲಿ ಏನೊ ಒಂದು ನಂಜೇರಿದಹಾಗೆ ಆಯಿತು.ಇವನು ಯಾಕೆ ಇಷ್ಟು ಖುಷಿಯಿಂದ ಇದ್ದಾನೆ?ಅದೂ ಇಷ್ಟು ಸಣ್ಣ ಕೆಲಸ ಮಾಡ್ಕೊಂಡು? ಹೋಗಿ ಒಮ್ಮೆ ಕೇಳಿ ಬರಬೇಕೆಂದು ತಾನು ಬಂದ ಕೆಲಸ ಮರೆತು ಸಿಟ್ಟಿನಿಂದ ಹೋಗಿ ಒಮ್ಮೆಕೇಳುತ್ತಾನೆ. ನೀನು ಇಷ್ಟು ಸಣ್ಣ ಕೆಲಸದಲ್ಲೂ ಇಷ್ಟು ಖುಷಿಯಲ್ಲಿದ್ದೀಯಾ?
ನಿನ್ನ ಜೀವನದಲ್ಲಿ ನೀನು ನೋವೇ ಅನುಭವಿಸಲಿಲ್ಲವಾ?ಕಷ್ಟ ಅನುಭವಿಸಿಯೇ ಇಲ್ಲವಾ?ನಿನ್ನ ಕುಟುಂಬದವರು ಎಲ್ಲರೂ ಸಂತೋಷದಲ್ಲಿರಬಹುದು.ಹಾಗೆ ನೀನು ನೆಮ್ಮದಿಯಲ್ಲಿದ್ದೀಯ.
ನನಗೆ ಮಾತ್ರ ಇಂತಹಾ ನೋವು – ಕಷ್ಟ ಎಂದು ಗೋಗರೆದ.
ಈ ಚಹಾ ಮಾರುವವನು ಒಂದು ಕ್ಷಣಕ್ಕೆ ಬೆರಗಾದರೂ ಇವನ ಮನಸ್ಸಿನಾಳದ ಉದ್ದೇಶ ತಿಳಿಯಿತು.ಇವನಿಗೆ ಏನೋ ಸಂಭವಿಸಿದೆ?ಇದು ಆತ್ಮಹತ್ಯೆಗೆನೇ ಇಲ್ಲಿಗೆ ಬಂದಿರೋದು ಎಂದು ತಿಳಿಯಿತು.ಇವನು ಹೇಳಿದ್ದನ್ನೆಲ್ಲಾ ಮಂದಹಾಸದಿಂದ ಕೇಳುತ್ತಾನೆ.ಇವನ ನೋಡಿ ರೋಶನ್ ಇನ್ನೂ ಖಿನ್ನತೆಗೊಳಗಾಗುತ್ತಾನೆ.ಸಿಟ್ಟು ನೆತ್ತಿಗೇರುತ್ತದೆ. “ನೀನು ನಗು.ನಿನ್ನ ಜೀವನ ನೆಮ್ಮದಿಯಾಗಿದೆ.ನಾನೇ ಹೀಗೆ.ನನ್ನ ಹಾಗೇ ಯಾರೂ ಅನಿಭವಿಸಲಿಕ್ಕಿಲ್ಲ”. ಅವನ ಮಂದಹಾಸ ಇವನನ್ನು ಆತ್ಮಹತ್ಯೆಗೆ ಇನ್ನೂ ಹೆಚ್ಚಾಗಿ ಪ್ರೇರೇಪಿಸಿತು.ಕಣ್ಣೀರು ಹಾಕೊಂಡು,ತಲ್ಲೀನನಾಗುತ್ತಾಪುನಃ ಬ್ರಿಡ್ಜ್ ಬಳಿಗೆ ಹೋಗುವಾಗ,,

ಮಂದಹಾಸದಲ್ಲಿದ್ದ ಚಹಾಮಾರುವವನು ಕಣ್ಣೀರು ಹಾಕೊಂಡು ಜೋರಾಗಿ ಅತ್ತು ಹೇಳುತ್ತಾನೆ.

ಹೇಯ್….
ನೀನು ನಿನ್ನನ್ನು ಪ್ರೀತಿಯಿಂದ ಸಾಕಿದ ತಂದೆ ಮತ್ತುತಾಯಿ ಅಪಘಾತದಲ್ಲಿ ಕಣ್ಣೆದುರು ರಕ್ತಪಾತರಾಗಿ ನರಳಿ ಸಾಯುವುದನ್ನು ಕಂಡಿದ್ದೀಯಾ?

ನೀನು ನಿನ್ನ ಕಣ್ಣೆದುರು ಮಗಳನ್ನು ಅತ್ಯಾಚಾರ ಮಾಡಿ ಕೊಂದದ್ದು ಕಂಡಿದ್ದೀಯಾ?

ನೀನು ನಿನ್ನ ಕಣ್ಣೆದುರು ನಿನ್ನ ಹೆಂಡತಿ ಆತ್ಮಹತ್ಯೆ ಮಾಡುವುದನ್ನು ಕಂಡಿದ್ದೀಯಾ?

ನೀನು ಒಂದು ಕಾಲು,ಕಿಡ್ನಿ ಇಲ್ಲದೆ ಜೀವಿಸಿದ್ದೀಯಾ?

ನೀನು 18 ಲಕ್ಷ ಸಾಲದ ಸವಾಲನ್ನೂ ಎದುರಿಸಿದ್ದೀಯಾ?

ನೀನು…….!!!ಬೇಡ.ನಾನು ಇನ್ನು ಮುಂದೆ ಹೇಳುವುದಿಲ್ಲ.

“ಅದೆಲ್ಲಾ ಬೇಡ.ಅಲ್ಲೊಬ್ಬ ನೋಡು.ಅವನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ.ಇನ್ನು 20 ದಿನಗಳಲ್ಲಿ ಅವನು ಸಾಯುತ್ತಾನೆ.ಅದು ಅವನಿಗೂ ತಿಳಿದಿದೆ.ಅವನೆಷ್ಟು ಖುಷಿಯಲ್ಲಿ ಅಲ್ಲಿ ಊಟ ಮಾಡುತ್ತಿದ್ದಾನೆ.
ನಿನಗೆ ನಿನ್ನದೇ ಸಮಸ್ಯೆಗಳು ನಿನ್ನದೇ ನೋವುಗಳು.ನಿನಗಿಂತ ಮಿಗಿಲಾದ ಸಮಸ್ಯೆಗಳು ಇತರರಲ್ಲಿದೆ.ಅವರನ್ನು ಅರ್ಥೈಸಿಕೊಂಡು ಜೀವನದಲ್ಲಿ ಮುಂದೆ ಸಾಗು.ಸಮಸ್ಯೆ ಇಲ್ಲದೇ ಬದುಕಲು ಈ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ.ಸಮಸ್ಯೆಯೊಂದಿಗೆ ಬದುಕುವುದೇ ನಿಜವಾದ ಜೀವನ.ಅದನ್ನು ಕಲಿ”ಎಂದು ಅಳುತ್ತಾ ಉತ್ತರಿಸಿದರು.

ರೋಶನ್ ಸಂಪೂರ್ಣ ಚಿಂತಾಮಗ್ನನಾಗಿ ಹೋಗುತ್ತಾನೆ.ಒಂದು ಆಶ್ವಾಸನೆಯ ಜೀವನದ ಪರಿಮಳ ಸುರಿಯಲು ಪ್ರಾರಂಭಿಸಿತು.ಕಣ್ಣೀರೆಲ್ಲಾ ಆತ್ಮವಿಶ್ವಾಸದ ಕಡೆಗೆ ಮಾರ್ಪಾಡಾಯಿತು.ಆತ್ಮಹತ್ಯೆಯ ನಿರ್ಧಾರವನ್ನು ಸಂಪೂರ್ಣವಾಗಿ ತ್ಯಜಿಸಿ,ನಾನು ಏನಾದರು ಒಂದು ಮಾಡಿ ಜೀವನವನ್ನು ಮುಂದೆ ಸಾಗಿಸುತ್ತೇನೆ.ಒಂದು ಸಂದರ್ಭವನ್ನು ದೇವರು ನನಗೆ ನೀಡುವರು ಎಂದು ಹೇಳುತ್ತಾ ಮನೆಗೆ ವಾಪಾಸ್ ಆದ.

ಆ ಒಂದು ಘಟನೆ ರೋಶನ್ ನ ನಕರಾತ್ಮಕ ತೀರ್ಮಾನವನ್ನೂ,ಅವನ ಜೀವನವನ್ನೂ ಬದಲಾಯಿಸಿತು.
ಚಹಾ ಮಾರುವವನಿಗೆ ಜೀವನದಲ್ಲಿ ಆಗಬಾರದ ಘಟನೆ ನಡೆದಿದೆ.ಇವನು ಆ ಸಮಸ್ಯೆಯನ್ನು ಎದುರಿಸಿ,ಸಕರಾತ್ಮಕ ಚಿಂತನೆಯಿಂದ ಜೀವನ ಸಾಗಿಸುತ್ತಿದ್ದಾನೆ ಎಂಬ ವಿಚಾರ ಇವನಿಗೆ ಹಲವು ದಿನಗಳ ನಂತರ ತಿಳಿಯುತ್ತದೆ.

16 Comments

  1. really heart felt. in this world many are there because of problems they leave their life not even understanding the purpose of life. story is also heart touching 5/5.

    Liked by 1 person

  2. ಕನ್ನಡ ಪದಪುಂಜಗಳನ್ನು‌ ಅತ್ಯಂತ ಅದ್ಬುತ ಶೈಲಿಯಲ್ಲಿ ಬಳಕೆ ಮಾಡಿದ ಉತಮ್ಮ ಶೈಲಿಯ ಬರವಣಿಗೆ

    Liked by 1 person

  3. Masha allah ಜೀವನದಲ್ಲಿ ಕಷ್ಟಗಳು ಎದುರಾದರೂ ಅದನ್ನು ನಾವು ಹೇಗೆ ಎದುರಿಸಬೇಕು ಮತ್ತು ಕೆಟ್ಟ ಯೋಚನೆಗಳನ್ನು ಬಿಟ್ಟು ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದು ಹಾಗೆ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ನಮಗೆಲ್ಲರಿಗೂ ಒಂದು ಕಥೆಯ ಮೂಲಕ ತಿಳಿಸಿಕೊಟ್ಟು ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು ❤️🥰

    Liked by 1 person

Leave a reply to SIDDIQ JARIGEBAILU Cancel reply